‘ಮೋದೀದು ಮನ್ ಕಿ ಬಾತ್, ನಮ್ಮದು ವಾಂಗೀಭಾತ್’

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha-Indira

ಬೆಂಗಳೂರು, ಆ.16- ಕಳೆದ ಮೂರು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿ ಮನ್ ಕಿ ಬಾತ್ ಮಾಡುತ್ತಿದ್ದಾರೆ. ಆದರೆ ನಾವು ಬಡವರ ಹೊಟ್ಟೆ ತುಂಬಿಸುವ ವಾಂಗಿಭಾತ್ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. ಕನಕನಪಾಳ್ಯದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಯ ನಂತರ ಇತರ ನಾಯಕರೊಂದಿಗೆ ಕ್ಯಾಂಟೀನ್‍ನಲ್ಲಿ ತಯಾರಿಸಿದ್ದ ವಾಂಗೀಭಾತ್ ಸವಿಯುತ್ತಾ ಅವರು ಮಾತನಾಡಿದರು. ಈ ಸಂದರ್ಭ ಅನೇಕ ಸಚಿವರು , ನಾಯಕರು ಉಪಸ್ಥಿತರಿದ್ದರು.  ಇದಕ್ಕೂ ಮುನ್ನ ವಿಮಾನ ನಿಲ್ದಾಣದಿಂದ ರಾಹುಲ್‍ಗಾಂಧಿ ಅವರು ಆಗಮಿಸುತ್ತಿದ್ದಂತೆ ನೂರಾರು ಕಾರ್ಯಕರ್ತರು ರಾಹುಲ್ ಪರ ಜಯಘೋಷ ಮೊಳಗಿಸಿದರು.

Facebook Comments

Sri Raghav

Admin