ಹುಷಾರ್, ಇದು ಟಾಫಿಯಲ್ಲ, ಡ್ರಗ್ಸ್ ಚಾಕೋಲೆಟ್..!

ಈ ಸುದ್ದಿಯನ್ನು ಶೇರ್ ಮಾಡಿ

Toffees

ಹೈದರಾಬಾದ್, ಆ.16-ಟಾಫಿ ಮತ್ತು ಚಾಕೋಲೆಟ್ ಮಾದರಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ವ್ಯವಸ್ಥಿತ ದಂಧೆ ಹೈದರಾಬಾದ್‍ನಲ್ಲಿ ಮತ್ತೆ ಬೆಳಕಿಗೆ ಬಂದಿದೆ. ಈ ಸಂಬಂಧ ಸೈಬರಾಬಾದ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ 10 ಲಕ್ಷ ಲಕ್ಷ ರೂ. ಮೌಲ್ಯದ ಡ್ರಗ್ಸ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಹೈದರಾಬಾದ್‍ನಲ್ಲಿ ಇತ್ತೀಚಿಗೆ ನಡೆದ ಮೂರನೇ ಕಾರ್ಯಾಚರಣೆ. ಟಾಫಿ, ಚಾಕೋಲೆಟ್ ಮತ್ತು ಮಾತ್ರೆಗಳ ಮಾದರಿಯಲ್ಲಿದ್ದ ಇವುಗಳಲ್ಲಿ ಕೊಕೈನ್, ಎಂಡಿಎಂಎ, ಎಲ್‍ಎಸ್‍ಡಿ ಮತ್ತು ಗಾಂಜಾಗಳು ಇದ್ದವು. ಮಹಿಳೆಯರೂ ಸೇರಿದಂತೆ ಹೈದರಾಬಾದ್ ಮತ್ತಿತ್ತರ ಸ್ಥಳಗಳಲ್ಲಿ ಈ ಟಾಫಿ ಡ್ರಗ್ಸ್‍ಗೆ ಗ್ರಾಹಕರು ಇದ್ದರೆಂದು ಸೈಬರಾಬಾದ್ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ತಿಳಿಸಿದ್ದಾರೆ.

Facebook Comments

Sri Raghav

Admin