ಅಪರೇಷನ್ ಡಾಗ್ : ಸಾರ್ವಜನಿಕರ ಮೇಲೆರಗುತಿದ್ದ ಬೀದಿ ನಾಯಿಗಳ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

dogs

ಬೆಂಗಳೂರು,ಆ.17- ಕೆಟ್ಟ ಮೇಲೆ ಬುದ್ದಿ ಬಂತು ಎಂಬ ಗಾದೆ ಮಾತಿನಂತೆ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ನಂತರ ಬಿಬಿಎಂಪಿಗೆ ಕಡೆಗೂ ಬೀಡಾಡಿ ನಾಯಿಗಳನ್ನು ಹಿಡಿಯಲು ಕ್ರಮ ಕೈಗೊಂಡಿದೆ. ಕಳೆದ ಎರಡು ದಿನಗಳಲ್ಲಿ ನಗರದ ಎಂ.ಎಸ್.ರಾಮಯ್ಯ ನಗರದಲ್ಲಿ ಯುವತಿ ಸೇರಿದಂತೆ ಕೆಲವರ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ಮಾಡಿ ಗಾಯಗೊಳಿಸಿದ್ದವು. ಇದರಿಂದ ಆ ಭಾಗದಲ್ಲಿ ಜನರು ರಸ್ತೆಯಲ್ಲಿ ಓಡಾಡಲು ಅಂಜುತ್ತಿದ್ದಾರೆ.

ಮೊನ್ನೆ ಸಂಜೆ ಯುವತಿಯೊಬ್ಬಳನ್ನು ನಾಲ್ಕೈದು ನಾಯಿಗಳು ಅಟ್ಟಾಡಿಸಿ ಎಳೆದಾಡಿ ಆಕೆಯ ಕಾಲಿಗೆ ಕಚ್ಚಿದ್ದವು. ಈ ವೇಳೆ ಆಕೆ ಗಾಬರಿಯಿಂದ ಕೆಳಗೆ ಬಿದ್ದಿದ್ದಳು. ಇದರಿಂದ ಸ್ಥಳೀಯರು ತೀವ್ರ ಆಕ್ರೋಶಗೊಂಡಿದ್ದರು. ನಿನ್ನೆ ಮತ್ತೆ ಯುವಕನೊಬ್ಬ ನಡೆದು ಹೋಗುತ್ತಿದ್ದಾಗ, ಆತನ ಮೇಲೂ ನಾಯಿಗಳು ದಾಳಿ ನಡೆಸಿದ್ದವು.
ಕಳೆದ ಒಂದು ವಾರದಿಂದ ಬೀದಿ ನಾಯಿಗಳ ಹಾವಳಿ ಎಂ.ಎಸ್. ರಾಮಯ್ಯ ನಗರದಲ್ಲಿ ವಿಪರೀತವಾಗಿದ್ದು, ಪಾಲಿಕೆಗೆ ದೂರು ನೀಡಲಾಗಿದೆ. ಇಂದು ಪಾಲಿಕೆ ಅಧಿಕಾರಿಗಳು ಅಪರೇಷನ್ ಡಾಗ್ ಕೈಗೊಂಡಿದ್ದು, ನಾಲ್ಕೈದು ನಾಯಿಗಳನ್ನು ಸಾಗಿಸಿದ್ದಾರೆ.

Facebook Comments

Sri Raghav

Admin