ಇಂದಿರಾ ಕ್ಯಾಂಟಿನ್ ಸೇರಿ ಬಹುತೇಕ ಎಲ್ಲ ಕಾಮಗಾರಿಗಳಲ್ಲೂ ಭಾರೀ ಅವ್ಯವಹಾರ

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar--01

ಬೆಂಗಳೂರು, ಆ.17- ರಾಜಕಾಲುವೆ ವಿಸ್ತರಣೆ, ಟೆಂಡರ್‍ಶೂರ್ ಕಾಮಗಾರಿ, ಸ್ಕೈ ವಾಕ್, ಇಂದಿರಾ ಕ್ಯಾಂಟಿನ್ ಬಹುತೇಕ ಎಲ್ಲ ಕಾಮಗಾರಿಗಳಲ್ಲೂ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ನಾನು ಮಾಡಿರುವ ಗಂಭೀರ ಆರೋಪವನ್ನು ಸಾಬೀತುಪಡಿಸುತ್ತೇನೆ. ಈ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತೇನೆ ಎಂದು ಬಿಜೆಪಿ ಮುಖಂಡ, ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಹೇಳಿದರು.

ಬಿಬಿಎಂಪಿಯಲ್ಲಿ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಬೈರತಿ ಬಸವರಾಜ್, ಮುನಿರತ್ನ, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವರ ವಿರುದ್ಧ ಏಳು ಪ್ರಮುಖ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದೇನೆ. ಇದಕ್ಕೆ ನನ್ನ ವಿರುದ್ಧ ಲೇವಡಿ ಮಾಡುತ್ತಾರೆ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಮಾಡಿರುವ ಆರೋಪಗಳ ಬಗ್ಗೆ ನನ್ನಲ್ಲಿ ಸರಿಯಾದ ದಾಖಲೆಗಳಿವೆ. ಈ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ರಾಜಕಾಲುವೆ ವಿಸ್ತರಣೆ ಸಂಬಂಧ ವ್ಯಕ್ತಿಯೊಬ್ಬ ನಗರಾಭಿವೃದ್ಧಿ ಸಚಿವರ ಮನೆಗೆ ಹೋಗಿ ಲಂಚ ಕೊಟ್ಟು ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯವಿದೆ. ಬೇಕಾದರೆ ಇವರೆಲ್ಲ ನನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಿ. ಇವರು ಕೂಡ ಮಂಪರು ಪರೀಕ್ಷೆಗೆ ಒಳಗಾಗಲಿ. ಸತ್ಯಾಂಶ ಏನೆಂಬುದು ಹೊರಬರುತ್ತದೆ ಎಂದು ಸವಾಲು ಹಾಕಿದರು.

Facebook Comments

Sri Raghav

Admin