ಕಾಶ್ಮೀರದ ಪುಲ್ವಾಮಾದಲ್ಲಿ ಲಷ್ಕರ್ ಕಮ್ಯಾಂಡರ್’ನ ಹತ್ಯೆ

Lashkar-commander

ಜಮ್ಮು, ಆ.17-ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಿನ್ನೆ ರಾತ್ರಿ ಸೇನಾಪಡೆಗಳು ನಡೆಸಿದ ಎನ್‍ಕೌಂಟರ್‍ನಲ್ಲಿ ಲಷ್ಕರ್-ಎ-ತೈಬಾ (ಎಲ್‍ಇಟಿ) ಕಮ್ಯಾಂಡರ್ ಹತನಾಗಿದ್ದಾನೆ. ಮತ್ತೊಂದೆಡೆ ಕಣಿವೆ ರಾಜ್ಯದ ಬದ್ಗಂನಲ್ಲಿ ಉಗ್ರಗಾಮಿಗಳ ಗ್ರೆನೇಡ್ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಸಿಆರ್‍ಪಿಎಫ್ ಯೋಧನೊಬ್ಬ ಹುತಾತ್ಮನಾಗಿದ್ದಾನೆ. ಪುಲ್ವಾಮ ಜಿಲ್ಲೆಯ ಕಾಕ್‍ ಪೋರಾದ ಬಂಡಿಪೋರಾದಲ್ಲಿ ನಿನ್ನೆ ರಾತ್ರಿ ಭದ್ರತಾಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಕೆಲವು ನಿಮಿಷಗಳ ಕಾಲ ನಡೆದ ಎನ್‍ಕೌಂಟರ್ ಬಳಿಕ ಎಲ್‍ಇಟಿ ಕಮ್ಯಾಂಡರ್ ಅಯೂಬ್ ಲೆಲ್ಹಾರಿ ಹತನಾದ.

ಈತ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ. ಇದು ನಮ್ಮ ಸೇನಾಪಡೆಯ ಮಹತ್ವದ ಕಾರ್ಯಾಚರಣೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರೀಕ್ಷಕ ಎಸ್.ಪಿ. ವೈದ್ ತಿಳಿಸಿದ್ದಾರೆ. ಕಾಶ್ಮೀರದ ಬದ್ಗಂನಲ್ಲಿ ಉಗ್ರಗಾಮಿಗಳ ಗ್ರೆನೇಡ್ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಸಿಆರ್‍ಪಿಎಫ್ ಯೋಧ ರಿಯಾಜ್ ಅಹಮದ್ ನಿನ್ನೆ ರಾತ್ರಿ ಹುತಾತ್ಮನಾಗಿದ್ದಾರೆ.

Facebook Comments

Sri Raghav

Admin