ಬೆಳ್ಳಂದೂರು ಕರೆಯಲ್ಲಿನ ನೊರೆ ಪ್ರಕರಣ : ಸರ್ಕಾರಕ್ಕೆ ಎನ್‍ಜಿಟಿ ತರಾಟೆ, ನೋಟಿಸ್ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Bellandur

ನವದೆಹಲಿ, ಆ.17-ದೇಶಾದ್ಯಂತ ಗಮನಸೆಳೆದಿದ್ದ ಬೆಂಗಳೂರಿನ ಬೆಳ್ಳಂದೂರು ಕರೆಯಲ್ಲಿನ ನೊರೆ ಪ್ರಕರಣದಲ್ಲಿ ಹಸಿರು ನ್ಯಾಯಮಂಡಳಿ (ಎನ್‍ಜಿಟಿ) ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದ್ದು, ನೋಟಿಸ್ ಜಾರಿಗೊಳಿಸಿದೆ.  ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕರೆಯಲ್ಲಿ ಮತ್ತೆ ನೊರೆ ರಾಶಿ ಉಲ್ಬಣಗೊಂಡು ಅಕ್ಕಪಕ್ಕದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಎನ್‍ಜಿಟಿ ಮತ್ತೊಮ್ಮೆ ಬೆಳ್ಳಂದೂರು ಕೆರೆಯ ನೊರೆ ಪ್ರಕರಣದಲ್ಲಿ ಸರ್ಕಾರಕ್ಕೆ ಮಂಗಳಾರತಿ ಮಾಡಿದೆ.

ಈ ಹಿಂದೆಯೇ ಮಲಿನ ಕೆರೆಯಲ್ಲಿ ಹೂಳೆತ್ತುವುದೂ ಸೇರಿದಂತೆ ರಕ್ಷಣೆಗಾಗಿ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಮತ್ತೆ ಇಲ್ಲಿ ನೊರೆ ಉಲ್ಬಣಗೊಂಡು ನಾಗರಿಕರಲ್ಲಿ ಸಾಂಕ್ರಾಮಿಕ ರೋಗದ ಆತಂಕ ಸೃಷ್ಟಿಯಾಗಿದೆ. ಇದರ ನಿವಾರಣೆಗೆ ಸರ್ಕಾರ ಏನು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಶ್ನಿಸಿ ಎನ್‍ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜÁರಿಗೊಳಿಸಿದ್ದಾರೆ.

Facebook Comments

Sri Raghav

Admin