ಮನಿಲಾದಲ್ಲಿ 32 ಡ್ರಗ್ ಡೀಲರ್‍ಗಳನ್ನು ಹೊಡೆದುರುಳಿಸಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Drug-Dealers--021

ಮನಿಲಾ, ಆ.17-ಫಿಲಿಪ್ಪೈನ್ಸ್ ಪೊಲೀಸರು ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ರಾಜಧಾನಿ ಮನಿಲಾ ಬಳಿ ಬುಲಾಕಾನ್ ಪ್ರಾಂತ್ಯದಾದ್ಯಂತ ನಡೆಸಿದ ಸರಣಿ ದಾಳಿಗಳಲ್ಲಿ 32 ಡ್ರಗ್ ಡೀಲರ್‍ಗಳು ಹತರಾಗಿದ್ದು, ಅನೇಕರನ್ನು ಸೆರೆ ಹಿಡಿಯಲಾಗಿದೆ.
ಬುಲಾಕಾನ್ ಪ್ರಾಂತ್ಯದ ವಿವಿಧ ಭಾಗಗಳಲ್ಲಿ 67 ಸ್ಥಳಗಳಲ್ಲಿ ನಡೆದ ದಾಳಿ ವೇಳೆ 32 ಮಾದಕವಸ್ತು ಕಳ್ಳಸಾಗಣೆದಾರರನ್ನು ಕೊಲ್ಲಲಾಗಿದ್ದು, 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಇದು ಏಕಕಾಲದ ಮತ್ತು ಅತಿ ದೊಡ್ಡ ಕಾರ್ಯಾಚರಣೆ ಎಂದು ಅವರು ತಿಳಿಸಿದ್ದಾರೆ.

ದ್ವೀಪರಾಷ್ಟ್ರ ಫಿಲಿಪ್ಪೈನ್ಸ್‍ನಲ್ಲಿ ವ್ಯಾಪಕವಾಗಿ ಹೆಚ್ಚಾಗುತ್ತಿರುವ ವ್ಯವಸ್ಥಿತ ಮಾದಕವಸ್ತು ಕಳ್ಳಸಾಗಣೆ ಜಾಲಗಳ ವಿರುದ್ಧ ಜೂನ್ 2016ರಿಂದ ಸರ್ಕಾರ ಬಿರುಸಿನ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಆಗಿನಿಂದ ಭದ್ರತಾಪಡೆಗಳ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಈವರೆಗೆ 3,451 ಮಂದಿ ಡ್ರಗ್ ಸ್ಮಗ್ಲರ್‍ಗಳು ಹತರಾಗಿದ್ದಾರೆ. ಅಲ್ಲದೇ ಮಾದಕವಸ್ತುವಿಗೆ ಸಂಬಂಧಪಟ್ಟ ಹಿಂಸಾಚಾರದಲ್ಲಿ 2,000ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ.

Facebook Comments

Sri Raghav

Admin