ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾರತಕ್ಕೆ 37 ಪದಕಗಳ ಗರಿ

ಈ ಸುದ್ದಿಯನ್ನು ಶೇರ್ ಮಾಡಿ

Sports--01

ನವದೆಹಲಿ, ಆ. 17- ಕೆನಡಾದ ಟೊರಾಂಟೋದಲ್ಲಿ ನಡೆದ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾರತದ ಆಥ್ಲೀಟ್ಸ್ ಗಳು 37 ಪದಕಗಳನ್ನು ಗೆಲ್ಲುವ ಮೂಲಕ ದೇಶದ ಹಿರಿಮೆಯನ್ನು ಮೆರೆದಿದ್ದಾರೆ. ಜಾಬ್ ಮ್ಯಾಥ್ಯೂ ಅವರು 2 ಚಿನ್ನ , ಮೂರು ಬೆಳ್ಳಿ ಹಾಗೂ ಒಂದು ಕಂಚು ಪದಕ ಗೆದ್ದುಕೊಂಡು ಉತ್ತಮ ಆಥ್ಲೀಟ್ ಆಗಿ ಹೊರಹಮ್ಮಿದ್ದಾರೆ. 24 ದೇಶಗಳಿಂದ ಆಗಮಿಸಿದ್ದ ಸುಮಾರು 400 ಅಥ್ಲೀಟ್‍ಗಳು ಒಂದು ವಾರ ನಡೆದ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿ ದ್ದರು. 15 ಚಿನ್ನ , 10 ಬೆಳ್ಳಿ ಹಾಗೂ 12 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಅತಿ ಹೆಚ್ಚು ಪದಕ ಗಳಿಸಿದ 10ನೆ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಭಾಜನವಾಯಿತು.

ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರು ಭಾರತದ ಅಥ್ಲೀಟ್ಸ್‍ಗಳ ಈ ಸಾಧನೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

Facebook Comments

Sri Raghav

Admin