ಸಾವಿನ ಮನೆಯಾದ ಬಿಆರ್‍ಡಿ ಆಸ್ಪತ್ರೆ, 3 ದಿನಗಳಲ್ಲಿ ಮತ್ತೆ 34 ಮಕ್ಕಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

BRD-Hospitala--01

ಗೋರಖ್‍ಪುರ್, ಆ.17-ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸ್ವಕ್ಷೇತ್ರವಾದ ಗೋರಖ್‍ಪುರ್‍ನ ಬಿಆರ್‍ಡಿ ಮೆಡಿಕಲ್ ಕಾಲೇಜು ಸಾವಿನ ಮನೆಯಾಗುತ್ತಿದೆ. ಸೋಮವಾರ ಮತ್ತು ಬುಧವಾರದ ನಡುವೆ ಮತ್ತೆ ಇನ್ನೂ 34 ಮಕ್ಕಳು ದುರಂತ ಸಾವಿಗೀಡಾಗಿದ್ಧಾರೆ. ಮಾರಕ ಜಪಾನಿಸ್ ಎನ್ಸೆಫಾಲಿಟಿಸ್ ಮತ್ತು ಅಕ್ಯೂಟ್ ಎನ್ಸೆಫಾಲಿಟಿಸ್ ಎಂಬ ಮಾರಕ ಮೆದುಳು ಸೋಂಕು ರೋಗಗಳು ಮುಗ್ಧ ಮಕ್ಕಳನ್ನು ಆಪೋಶನ  ತೆಗೆದುಕೊಳ್ಳುತ್ತಿದೆ.

ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕ (ಎನ್‍ಐಸಿಯು) ಮತ್ತು ಎನ್ಸೆಫಾಲಿಟಿಸ್ ವಾರ್ಡ್‍ನಲ್ಲೇ ಬಹುತೇಕ ಮಕ್ಕಳ ಸಾವು ಸಂಭವಿಸಿದೆ. ಸೋಮವಾರ ಸಂಜೆ 5 ಗಂಟೆಯಿಂದ ಮಂಗಳವಾರ ಸಂಜೆ 5 ಗಂಟೆವರೆಗೆ 24 ಮಕ್ಕಳು ಮೃತಪಟ್ಟಿದ್ದಾರೆ. ಎನ್‍ಐಸಿಯುನಲ್ಲಿದ್ದ 19 ಮಕ್ಕಳಲ್ಲಿ ಎನ್ಸೆಫಾಲಿಟಿಸ್ ವಾರ್ಡ್‍ನಲ್ಲಿ ಐವರು ಚಿಣ್ಣರು ಸಾವಿಗೀಡಾಗಿದ್ದಾರೆ. ಮಂಗಳವಾರ ಸಂಜೆ 5 ರಿಂದ ಬುಧವಾರ ಸಂಜೆ 5ರವರೆಗೆ ಎನ್‍ಐಸಿಯುನಲ್ಲಿ 10 ಮತ್ತು ಎನ್ಸೆಫಿಲಾಟಿಸ್ ವಾರ್ಡ್‍ನಲ್ಲಿ ಮೂವರು ಮಕ್ಕಳು ಅಸುನೀಗಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಡಾ.ಪಿ.ಕೆ. ಸಿಂಗ್ ಖಚಿತಪಡಿಸಿದ್ದಾರೆ.  ಆಗಸ್ಟ್ 10 ಮತ್ತು 11ರಂದು ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಾಸವಾದ ಆಸ್ಪತ್ರೆಯಲ್ಲಿ ಈ ವಾರ್ಡ್‍ಗಳಲ್ಲಿ 30 ಮಕ್ಕಳು ಕೊನೆಯುಸಿರೆಳೆದಿದ್ದಾರೆ.

ಆಮ್ಲಜನಕ ಕೊರತೆಗೆ ವೈದ್ಯರು ಕಾರಣ :

ಬಿಆರ್‍ಡಿ ಆಸ್ಪತ್ರೆಯಲ್ಲಿ ಅನೇಕ ಮಕ್ಕಳ ಸಾವು ಕುರಿತು ತನಿಖೆ ನಡೆಸುತ್ತಿರುವ ಜಿಲ್ಲಾ ದಂಡಾಧಿಕಾರಿ ರಾಜೀವ್ ರೌಟೇಲಾ ನೇತೃತ್ವದ ತನಿಖಾ ತಂಡಕ್ಕೆ ಇಲ್ಲಿನ ಇಬ್ಬರು ವೈದ್ಯರ ಕರ್ತವ್ಯಲೋಪವೇ ಕಾರಣ ಎಂಬ ಅಂಶ ತಿಳಿದು ಬಂದಿದೆ.

Facebook Comments

Sri Raghav

Admin