ಸೊಸೆಗೆ ಹಿಂಸೆ ಕೊಡುತ್ತಿದ್ದ ಹೆತ್ತ ಮಗನನ್ನೇ ಕೊಂದ ತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

Women-Murder--01

ಮುಂಬೈ, ಆ.17-ಸೊಸೆಗೆ ಉಪಟಳ ನೀಡುತ್ತಿದ್ದ ಮಗನ ನಿರಂತರ ದೌರ್ಜನ್ಯದಿಂದ ಬೇಸತ್ತ ತಾಯಿಯೊಬ್ಬಳು ಪುತ್ರನನ್ನೇ ಕೊಲೆಗೈದ ಘಟನೆ ನಗರದ ಮಂಖುರ್ಡ್ ಪ್ರದೇಶದಲ್ಲಿ ನಡೆದಿದೆ.  ಸೊಸೆಯನ್ನು ರಕ್ಷಿಸಲು ಹೆತ್ತ ಮಗನನ್ನೇ ಉಸಿರುಗಟ್ಟಿಸಿ ಕೊಂದ ಮಹಿಳೆ ಅನ್ವರಿ ಇದ್ರೀಸಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.  ತನ್ನ ತಾಯಿಯಿಂದಲೇ ಕೊಲೆಗೀಡಾದ ನದೀಂ ನೈಮ್(25) ಅಂಬೇಡ್ಕರ್ ಚಾಲ್ ಪ್ರದೇಶದಲ್ಲಿ ತನ್ನ ಪತ್ನಿ, ತಾಯಿ ಮತ್ತು ಇಬ್ಬರು ಹಿರಿಯ ಸಹೋದರರು ಮತ್ತು ಅವರ ಪತ್ನಿಯರೊಂದಿಗೆ ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದ. ಮಾದಕ ವಸ್ತುವಿಗೆ ದಾಸನಾಗಿದ್ದ ಈತ ಪತ್ನಿಯನ್ನು ವಿನಾಕಾರಣ ಹಿಂಸಿಸಿ ಕುಟುಂಬದ ಸದಸ್ಯರಿಗೂ ತೊಂದರೆ ನೀಡುತ್ತಿದ್ದ.

ಇದೇ ರೀತಿ ಮಂಗಳವಾರ ರಾತ್ರಿ ನಶೆಯಲ್ಲಿ ತೇಲಾಡುತ್ತಿದ್ದ ಈತನಿಗೆ ತಾಯಿ ಬುದ್ದಿ ಹೇಳಿದ್ದರು. ಇದರಿಂದ ಕುಪಿತನಾದ ನದೀಂ ತಾಯಿ ಮೇಲೆ ಹಲ್ಲೆ ಮಾಡಿದ. ಸೊಸೆಗೆ ಸತತ ಕಿರುಕುಳ ನೀಡುತ್ತಾ ಮನೆಯವರಿಗೂ ಕಾಟ ಕೊಡುತ್ತಿದ್ದ ಈತನ ವರ್ತನೆಯಿಂದ ಕೋಪಗೊಂಡ ಅನ್ವರಿ, ಅಮಲಿನಲ್ಲಿದ್ದ ಮಗನಿಗೆ ದುಪ್ಪಟ್ಟದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಸಾಯಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin