ಅಸ್ಸಾಂನಲ್ಲಿ ಭೀಕರ ಪ್ರವಾಹ : ಕಾಜಿರಂಗ ಪಾರ್ಕ್‍ನಲ್ಲಿ 150ಕ್ಕೂ ಹೆಚ್ಚು ಪ್ರಾಣಿಗಳು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Kaziranga

ಕಾಜಿರಂಗ, ಆ.18- ಈಶಾನ್ಯ ರಾಜ್ಯ ಅಸ್ಸಾಂನ ವಿಶ್ವವಿಖ್ಯಾತ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರೀ ಪ್ರವಾಹದಿಂದ ಏಳು ಘೇಂಡಾಮೃಗಗಳೂ (ಖಡ್ಗಮೃಗಗಳು) ಸೇರಿದಂತೆ 150ಕ್ಕೂ ಹೆಚ್ಚು ಪ್ರಾಣಿಗಳು ಮೃತಪಟ್ಟಿವೆ. ವನ್ಯಧಾಮದ 481 ಚದರ ಕಿ.ಮೀ. ವ್ಯಾಪ್ತಿ ಪ್ರದೇಶದ ಶೇ.80ರಷ್ಟು ಭಾಗ ಜಲಾವೃತವಾಗಿದ್ದು, ಖಗ-ಮೃಗಗಳೊಂದಿಗೆ ಅಪಾರ ಪ್ರಮಾಣದ ವನಸಂಪತ್ತೂ ನಾಶವಾಗಿದೆ.

ಆಗಸ್ಟ್ 10ರಿಂದ ಕಾಜಿರಂಗ ನ್ಯಾಷನಲ್ ಪಾರ್ಕ್ ಭೀಕರ ನೆರೆ ಹಾವಳಿಗೆ ತುತ್ತಾಗಿದ್ದು, ಏಳು ಖಡ್ಗ ಮೃಗಳು, 122 ಜಿಂಕೆಗಳು, ಎರಡು ಆನೆಗಳು, ಮೂರು ಕಾಡು ಹಂದಿಗಳು, ಎರಡು ಕಡವೆಗಳು, ಮೂರು ಸಂಬಾರ್ ಜಿಂಕೆಗಳು, ಒಂದು ಕಾಡುಕೋಣ ಮತ್ತು ಒಂದು ಮುಳ್ಳುಹಂದಿ ಮೃತಪಟ್ಟಿವೆ ಎಂಧು ಕೆಎನ್‍ಪಿ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‍ಒ) ರೋಹಿಣಿ ಬಲ್ಲವರ ಸೈಕಿಯಾ ಹೇಳಿದ್ಧಾರೆ.  ದಿನವೂ ಪ್ರಾಣಿಗಳ ಮೃತದೇಹಗಳು ಪತ್ತೆಯಾಗುತ್ತಲೇ ಇದ್ದು ಪ್ರವಾಹ ಇಳಿಮುಖವಾದ ನಂತರ ಮತ್ತಷ್ಟು ವನ್ಯಜೀವಿಗಳ ಸಾವಿನ ಬಗ್ಗೆ ಮಾಹಿತಿ ಲಭಿಸಲಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin