ಎರಡು ಬಸ್‍ಗಳು ಮುಖಾಮುಖಿ ಡಿಕ್ಕಿ, 28 ಪ್ರಯಾಣಿಕರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Chikkamagaluru--01

ಚಿಕ್ಕಮಗಳೂರು,ಆ.18- ಎರಡು ಬಸ್‍ಗಳು ಮುಖಾಮುಖಿ ಡಿಕ್ಕಿಯಾಗಿ 28 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕೊಪ್ಪ ತಾಲೂಕಿನ ಕಲ್ಕೆರೆ ಸಮೀಪ ನೆನ್ನೆ ಸಂಜೆ ಸಂಭವಿಸಿದೆ.  ಚಿಕ್ಕಮಗಳೂರಿನಿಂದ ಕೊಪ್ಪಗೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಹಾಗೂ ಕೊಪ್ಪದಿಂದ ಬಾಳೆಹೊನ್ನೂರಿಗೆ ಬರುತ್ತಿದ್ದ ಖಾಸಗಿ ಬಸ್ ಪರಸ್ಪರ ಡಿಕ್ಕಿಯಾಗಿ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಇಳಕಲ್‍ನ ಚಂದ್ರಶೇಖರ್ ಹಾಗೂ ಖಾಸಗಿ ಬಸ್ ಚಾಲಕ ಶಮಂತ್‍ಗೆ ಗಂಭೀರ ಗಾಯಗಳಾಗಿದ್ದು, ಮಣಿಪಾಲದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಮೇಶ, ಲಿಂಗಪ್ಪ, ವಿನೋದ, ಅನುಷಾ, ಸುಮಾ, ಹರೀಶ್‍ರಾವ್, ನಾರಾಯಣ, ವಾಸು, ಮಂಜುನಾಥ್, ರಶ್ಮಿ, ಅಕ್ಷಯ್ ಕುಮಾರ್, ಲಕ್ಷ್ಮೀಕಾಂತ್, ಅನುಶ್ರೀ ಸೇರಿದಂತೆ ಖಾಸಗಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ 16 ಹಾಗೂ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿದ್ದ 12 ಮಂದಿಗೆ ಗಾಯಗಳಾಗಿದ್ದು, ಇವರೆಲ್ಲರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಜ್ಜುಗುಜ್ಜಾಗಿರುವ 2 ಬಸ್‍ಗಳನ್ನು ವಶಕ್ಕೆ ಪಡೆದಿರುವ ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin