ಗಾಯಗೊಂಡಿದ್ದ ಅಪರೂಪದ ಗೂಬೆ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Kolara  01

ಕೋಲಾರ, ಆ.18- ಗಾಯಗೊಂಡಿದ್ದ ಅಪರೂಪದ ದೊಡ್ಡ ಗೂಬೆಯೊಂದನ್ನ ಕೋಲಾರದ ಪ್ರಾಣಿ ದಯಾ ಸಂಘಟನೆಯ ಅನಿಮಲ್ ಮುರಳಿ ರಕ್ಷಿಸಿ ಚಿಕಿತ್ಸೆ ಕೊಡಿಸಿ ಪಕ್ಷಿಯ ಜೀವ ಉಳಿಸಿದ್ದಾರೆ. ಕೆಜಿಎಫ್ ರಾಬರ್ಟ್‍ಸನ್ ಪೇಟೆಯಲ್ಲಿ ಅಪರೂಪದ ಗೂಬೆ ಗಾಯಗೊಂಡು ಸಾವು -ಬದುಕಿನ ನಡುವೆ ಹೋರಾಟ  ನಡೆಸುತಿತ್ತು. ಇದನ್ನು ಕಂಡ ಪಕ್ಷಿ ಪ್ರೇಮಿ ಮುರಳಿ ಕೂಡಲೆ ಪ್ರಥಮ ಚಿಕಿತ್ಸೆ ನೀಡಿ ನಂತರ ಕೋಲಾರದ ಪಶು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರು.
ಗ್ರೇಟ್ ಇಂಡಿಯನ್ ಆನ್ ಓಲ್ ಎನ್ನಲಾಗಿದ್ದು, ಭಾರತ ದೇಶದಲ್ಲಿರುವ ಅಪರೂಪದ ಗೂಬೆಗಳಲ್ಲಿ ಅತೀ ದೊಡ್ಡ ಗೂಬೆ ಎನ್ನಲಾಗಿದೆ. ಅದರಲ್ಲೂ ಪ್ರಮುಖವಾಗಿ ನಮ್ಮ ದೇಶದಲ್ಲಿ ಈ ಪಕ್ಷಿಗಳು ಕಾಣಸಿಗುವುದು ಅಪರೂಪದಲ್ಲಿ ಅಪರೂಪ ಎಂಬ ಅಬಿಪ್ರಾಯ ಪಕ್ಷಿ ಪ್ರಿಯರಲ್ಲಿ ಕೇಳಿ ಬಂದಿದೆ.

ಹಾಗಾಗಿ ಪಕ್ಷಿಯ ಜೀವ ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಂತೆ ಕೋಲಾರದಲ್ಲಿ ಪ್ರಥಮ ಚಿಕಿತ್ಸೆ ಕೊಡಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆಯಲ್ಲಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ ಪಕ್ಷಿ ಪ್ರೇಮಿ ಮುರಳಿ.

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin