ಜೈಲಲ್ಲಿರುವ ಚಿನ್ನಮ್ಮನನ್ನು ಭೇಟಿಯಾದ ಟಿಟಿವಿ ದಿನಕರನ್

ಈ ಸುದ್ದಿಯನ್ನು ಶೇರ್ ಮಾಡಿ

Sasika--01

ಬೆಂಗಳೂರು, ಆ.18- ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ರಹಸ್ಯದ ತನಿಖೆಗೆ ಅಲ್ಲಿನ ಪಳನಿಸ್ವಾಮಿ ಸರ್ಕಾರ ಆದೇಶಿಸಿರುವ ಹಿನ್ನೆಲೆ ಯಲ್ಲಿ ಎಐಡಿಎಂಕೆ ಮುಖಂಡ ಟಿ.ಟಿ.ವಿ.ದಿನಕರನ್ ಇಂದು ಪರಪ್ಪನಅಗ್ರಹಾರ ಜೈಲಿನಲ್ಲಿ ರುವ ಶಶಿಕಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಜಯಲಲಿತಾ ಅವರ ಸಾವು ಸ್ವಾಭಾವಿಕವಾಗಿ ಆಗಿಲ್ಲ. ಹಲವು ಅನುಮಾನಗಳಿಂದ ಕೂಡಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ನ್ಯಾಯಂಗ ತನಿಖೆಗೆ ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ ಅವರ ಪರಮಾಪ್ತರಾಗಿದ್ದ ಶಶಿಕಲಾ ಅವರೊಂದಿಗೆ ಮಾತುಕತೆ ನಡೆಸಲು ಅವರ ಸಂಬಂಧಿ ಟಿ.ಟಿ.ವಿ.ದಿನಕರನ್ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ಜೈಲಿನಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಎಂಬುದು ತಿಳಿದು ಬಂದಿದೆ.
ಎಐಎಡಿಎಂಕೆ ಮತ್ತು ಒಪಿಎಸ್ ಬಣಗಳು ಒಂದಾಗಲು ಮುಂದಾಗಿದ್ದು, ಒ.ಪನ್ವೀರ್‍ಸೆಲ್ವಂ ಅವರು ಜಯ ಅವರ ನಿವಾಸ, ಪೋಯೆಸ್ ಗಾರ್ಡ್‍ನನ್ನು ಮ್ಯೂಜಿಯಂನನ್ನಾಗಿ ಪರಿವರ್ತಿಸಬೇಕು. ಜಯಾ ಅವರ ಸಾವಿನ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಸಾವಿನ ಪ್ರಕರಣವನ್ನು ಸರ್ಕಾರ ತನಿಖೆಗೆ ವಹಿಸಿದೆ. ಪೋಯೆಸ್ ಗಾರ್ಡ್‍ನನ್ನು ಸ್ಮಾರಕವಾಗಿ ಪರಿವರ್ತಿಸುವ ನಿರ್ಧಾರಕ್ಕೆ ಜಯಲಲಿತಾ ಅವರ ಸೊಸೆ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದಾರೆ.

Facebook Comments

Sri Raghav

Admin