ತಕ್ಷಣ ಲೋಕಸಭೆಗೆ ಚುನಾವಣೆ ನಡೆದರೆ 349 ಸ್ಥಾನಗಳನ್ನು ಗೆಲ್ಲಲಿದೆ ಎನ್‍ಡಿಎ..!

ಈ ಸುದ್ದಿಯನ್ನು ಶೇರ್ ಮಾಡಿ

BJP--NDA--01

ನವದೆಹಲಿ, ಆ.18-ಒಂದು ವೇಳೆ ಲೋಕಸಭೆಗೆ ತಕ್ಷಣ ಚುನಾವಣೆ ನಡೆದರೆ, ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‍ಡಿಎ 349 ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಅಲ್ಲದೇ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ವಂತ ಬಲದಿಂದ 298 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ವಿಶ್ಲೇಷಿಸಲಾಗಿದೆ.  ಇಂಡಿಯಾ ಟುಡೆ ಗ್ರೂಪ್-ಕಾರ್ವಿ ಇನ್‍ಸೈಟ್ಸ್ ಎಂಒಟಿಎನ್ ಮತ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುಪಿಎ 75 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಇತರ ಪಕ್ಷಗಳು 119 ಕ್ಷೇತ್ರಗಳಲ್ಲಿ ಗೆಲ್ಲುತ್ತವೆ.

ಮತ ಸಮೀಕ್ಷೆಯ ಮುಖ್ಯಾಂಶಗಳು

* ಬಿಜೆಪಿ ಮತದಾನ ಪಾಲಿನಲ್ಲಿ ಶೇ.35ರಷ್ಟು ಗಳಿಸಲಿದೆ (ಎನ್‍ಡಿಎಗಾಗಿ ಶೇ.42). ಕಾಂಗ್ರೆಸ್ ಶೇ.20 ಹಾಗೂ ಇತರ ಪಕ್ಷಗಳು ಶೇ.45 ಮತಗಳನ್ನು ಪಡೆಯುವ ನಿರೀಕ್ಷೆ ಇದೆ.
* ಒಟ್ಟಾರೆ ನರೇಂದ್ರ ಮೋದಿ ಅತ್ಯುತ್ತಮ ಪ್ರಧಾನಮಂತ್ರಿ ಎಂಬುದು ಜನಮತ ಗಣನೆಯಾಗಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗಿಂತಲೂ ಮೋದಿ ಜನಪ್ರಿಯತೆಯಲ್ಲಿ ಶೇ.16 ಅಂಕಗಳಿಂದ ಮುಂದಿದ್ದಾರೆ.
* ದಕ್ಷಿಣ ಭಾರತೀಯರ ಪಾಲಿಗೆ ಇಂದಿರಾಗಾಂಧಿ ಅತ್ಯುತ್ತಮ ಪ್ರಧಾನಿ.
* ಶೇ.63ರಷ್ಟು ಮಂದಿ ಪ್ರಧಾನಿ ಮೋದಿ ಅವರ ಸಾಧನೆಯನ್ನು ಉತ್ತಮ ಅಥವಾ ಅತ್ಯುತ್ತಮ ಎಂದು ಶ್ರೇಯಾಂಕ ನೀಡಿದ್ದಾರೆ.
ಅಭಿಪ್ರಾಯ ಸಂಗ್ರಹದಲ್ಲಿ ನರೇಂದ್ರ ಮೋದಿ ದೇಶದ ಜನಪ್ರಿಯ ನಾಯಕ
* ಮೋದಿ ಭಾರತದ ಗ್ರಾಮಾಂತರ ಭಾಗಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.
* ಶೇ.60ಕ್ಕೂ ಹೆಚ್ಚು ಜನರ ಪ್ರಕಾರ. ನೋಟು ಅಮಾನ್ಯಕರಣದಿಂದ ನೋವಿಗಿಂತ ಲಾಭವೇ ಹೆಚ್ಚಾಗಿದೆ.
* ಕಾಳದಂಧೆ ಮತ್ತು ಭ್ರಷ್ಟಾಚಾರದ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ಕಾರ್ಯಾಚರಣೆಯಲ್ಲಿ ಶೇ.23ರಷ್ಟು ಜನರು ಬೆಂಬಲಿಸಿದ್ದಾರೆ.
* ದಕ್ಷಿಣ ಪ್ರಾಂತ್ಯದಲ್ಲಿ ನೋಟು ಅಮಾನ್ಯಕರಣವನ್ನು ಎನ್‍ಡಿಎ ಸರ್ಕಾರದ ಅತಿದೊಡ್ಡ ಸಾಧನೆ ಎಂದು ಶ್ರೇಣಿ ನೀಡಲಾಗಿದೆ.
* ಏತನ್ಮಧ್ಯೆ, ಶೇ.25ರಷ್ಟು ಜನರು ರಾಹುಲ್ ಅವರನ್ನು ಕಾಂಗ್ರೆಸ್‍ನ ಉತ್ತಮ ಪ್ರಧಾನಮಂತ್ರಿ ಅಭ್ಯರ್ಥಿ ಎಂಬ ಒಲವು ವ್ಯಕ್ತಪಡಿಸಿದ್ದಾರೆ.
* ಮುಖ್ಯಮಂತ್ರಿಯಾಗಿ ಅತ್ಯುತ್ತಮ ಸಾಧನೆ ಮಾಡಿದ ಕೀರ್ತಿಗೆ ತೃಣ ಮೂಲ ಕಾಂಗ್ರೆಸ್ ಅಧಿನಾಯಕಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ನಂತರ ಸ್ಥಾನವನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಡೆದಿದ್ದಾರೆ.

Facebook Comments

Sri Raghav

Admin