ಪತ್ನಿ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ತಿಪಟೂರು, ಆ.18- ವರದಕ್ಷಿಣೆ ಹಣಕ್ಕಾಗಿ ಪತ್ನಿಯನ್ನು ಕೊಂದು ಮಾವನಿಗೆ ಚಾಕು ಹಾಕಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್. ಶಾರದಾ ತೀರ್ಪು ನೀಡಿದ್ದಾರೆ. ಪತ್ನಿ ಕೊಲೆ ಮಾಡಿದ್ದಕ್ಕೆ ಜೀವಾವಧಿ ಶಿಕ್ಷೆ ಮತ್ತು 10ಸಾವಿರ ರೂ. ದಂಡ ಹಾಗೂ ಮಾವನಿಗೆ ಚಾಕುವಿನಿಂದ ಇರಿದ ಅಪರಾಧಕ್ಕೆ 7ವರ್ಷ ಶಿಕ್ಷೆ, 5ಸಾವಿರ ರೂ. ದಂಡ ವಿಧಿಸಿದ್ದಾರೆ. ಆರೋಪಿ ಸೋಮಶೇಖರ ದಂಡಿನ ಶಿವರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳೆಕಟ್ಟೆ ಗ್ರಾಮದ ಸಿದ್ರಾಮಯ್ಯ ಎಂಬುವರ ಮಗಳಾದ ದಿವ್ಯಶ್ರೀಯನ್ನು ಮದುವೆಯಾಗಿದ್ದನು.

2014ರ ಮಾ.25ರಂದು ತಮ್ಮ ಮನೆಯಲ್ಲಿ ತಂದೆ ಮತ್ತು ಮಗಳು ಟಿವಿ ನೋಡುವಾಗ ಏಕಾಏಕಿ ಮನೆಗೆ ನುಗ್ಗಿದ ಆರೋಪಿ ಸೋಮಶೇಖರ ವರದಕ್ಷಿಣೆ ತರದೆ ತಂದೆಯ ಮನೆಯಲ್ಲಿಯೇ ಇರಿಸಿಕೊಂಡಿದ್ದೀಯ ಎಂದು ಪತ್ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದು, ಬಿಡಿಸಲು ಬಂದ ಮಾವನಿಗೂ ಸಹ ಚಾಕುವಿನಿಂದ ಇರಿದಿದ್ದ.

ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯ ಅಂದಿನ ಆರಕ್ಷಕ ಉಪ ನಿರೀಕ್ಷಕ ಚಿದಾನಂದಮೂರ್ತಿ ಪ್ರಕರಣ ದಾಖಲಿಸಿಕೊಂಡಿದ್ದರು. ಮುಂದಿನ ತನಿಖೆಯನ್ನು ಅಂದಿನ ಕುಣಿಗಲ್ ಉಪವಿಭಾಗಾದ ಪೊಲೀಸ್ ಉಪಾಧೀಕ್ಷಕ ಕೆ.ಆರ್. ಗಣೇಶ್ ತನಿಖೆ ನಡೆಸಿ ಆರೋಪಿ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಮಂಜುನಾಥ್ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.

Facebook Comments

Sri Raghav

Admin