ಪರಿಸರ ನಾಶದಿಂದ ನಾವು ವಿನಾಶದತ್ತ ಸಾಗುತ್ತಿದ್ದೇವೆಯೇ..?

ಈ ಸುದ್ದಿಯನ್ನು ಶೇರ್ ಮಾಡಿ

Nature--01

– ಬಿ.ಎಸ್.ರಾಮಚಂದ್ರ

ಈಗಾಗಲೇ ವಾಯುಮಾಲಿನ್ಯದಿಂದ ಇಡೀ ಪರಿಸರದಲ್ಲಿ ಧೂಳಿನ ಪ್ರಮಾಣ ಹೆಚ್ಚುತ್ತಿದೆ. ಇದು ಜನಸಾಮಾನ್ಯರಲ್ಲಿ ಹಲವಾರು ಮಾರಕ ಕಾಯಿಲೆಗಳಿಗೂ ಕಾರಣವಾಗುತ್ತಿದೆ. ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ನಿಯಂತ್ರಣ ಇಡೀ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗುತ್ತಿದೆ. ಇಂತಹ ಎಲ್ಲಾ ಘಟನೆಗಳಿಗೂ ನಾವು ಕಳೆದುಕೊಳ್ಳುತ್ತಿರುವ ಹಸಿರು ವಾತಾವರಣವೇ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಪ್ರತಿ ದಿನ ಒಬ್ಬ ಮನುಷ್ಯ 540ರಿಂದ 900ಗ್ರಾಂನಷ್ಟು ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ಹೊರ ಹಾಕುತ್ತಾನೆ. ಆದರೆ, ಅದನ್ನು ಬಳಸಿಕೊಳ್ಳುವ ಮರಗಳನ್ನು ದಿನೇ ದಿನೇ ಕಡಿಯುತ್ತಿರುವುದರಿಂದ ಅಸಮತೋಲನ ಸೃಷ್ಟಿಯಾಗುತ್ತಿದೆ.

ದಿನೇ ದಿನೇ ನಮ್ಮ ದೈನಂದಿನ ಬದುಕು ಆಧುನಿಕತೆಯತ್ತ ದೌಡಾಯಿಸುತ್ತಿದೆ. ಇದರ ನಡುವೆಯೇ ನಮ್ಮ ಪರಿಸರವನ್ನು ಹಾಳು ಮಾಡಿ ನಾವು ಕೂಡ ವಿನಾಶದೆಡೆಗೆ ಸಾಗುತ್ತಿದ್ದೇವೆ. ಹುಷಾರ್. ಈಗಾಗಲೇ ವಾಯುಮಾಲಿನ್ಯದಿಂದ ಇಡೀ ಪರಿಸರದಲ್ಲಿ ಧೂಳಿನ ಪ್ರಮಾಣ ಹೆಚ್ಚುತ್ತಿದೆ. ಇದು ಜನಸಾಮಾನ್ಯರಲ್ಲಿ ಹಲವಾರು ಮಾರಕ ಕಾಯಿಲೆಗಳಿಗೂ ಕಾರಣವಾಗುತ್ತಿದೆ. ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ನಿಯಂತ್ರಣ ಇಡೀ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗುತ್ತಿದೆ. ಇಂತಹ ಎಲ್ಲಾ ಘಟನೆಗಳಿಗೂ ನಾವು ಕಳೆದುಕೊಳ್ಳುತ್ತಿರುವ ಹಸಿರು ವಾತಾವರಣವೇ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಪ್ರತಿ ದಿನ ಒಬ್ಬ ಮನುಷ್ಯ 540ರಿಂದ 900ಗ್ರಾಂನಷ್ಟು ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ಹೊರ ಹಾಕುತ್ತಾನೆ. ಆದರೆ, ಅದನ್ನು ಬಳಸಿಕೊಳ್ಳುವ ಮರಗಳನ್ನು ದಿನೇ ದಿನೇ ಕಡಿಯುತ್ತಿರುವುದರಿಂದ ಅಸಮತೋಲನ ಸೃಷ್ಟಿಯಾಗುತ್ತಿದೆ. ಕಳೆದ 40 ವರ್ಷಗಳಲ್ಲಿ ಬೆಂಗಳೂರು ಬದಲಾದ ರೀತಿ ನೋಡಿದರೆ ಅಚ್ಚರಿಯ ಜತೆಗೆ ಭಯವೂ ಸೃಷ್ಟಿಯಾಗುತ್ತಿದೆ. ಹಿಂದೊಮ್ಮೆ ಹಸಿರು ನಗರಿ (ಗಾರ್ಡನ್ ಸಿಟಿ) ಎಂದು ಖ್ಯಾತಿ ಪಡೆದಿದ್ದು, ಈಗ ಕಾಂಕ್ರೀಟ್ ನಗರಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತಿದೆ.

ಸುಮಾರು 900 ಚ.ಕಿ.ಮೀನಷ್ಟು ವಿಸ್ತೀರ್ಣದ ಬೆಂಗಳೂರು ನಗರ ಬೆಳೆಯುತ್ತಲೇ ಇದೆ. ದಿನೇ ದಿನೇ ಏಳುತ್ತಿರುವ ಕಟ್ಟಡಗಳಿಂದ ಇಡೀ ವಾತಾವರಣ ಬಿಸಿಯಾಗುತ್ತಿದೆ. ಹೀಗೆ ಮುಂದುವರೆದರೆ ಬರುವ 2020ರ ವೇಳೆಗೆ ನಾವು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೆ ಇದ್ದಂತಹ ಹೇರಳವಾದ ಮರಗಳು, ಔಷಧಿ ಸಸ್ಯಗಳು ನಮ್ಮ ಪ್ರಕೃತಿ ಸಮತೋಲನವನ್ನು ಕಾಪಾಡುತ್ತಿದ್ದವು. ಈಗ ರಸ್ತೆ ಅಗಲೀಕರಣ, ಫ್ಲೈ ಓವರ್‍ಗಳು, ಮೆಟ್ರೋಗಳಂತಹ ಯೋಜನೆಗಳು ಒಂದೆಡೆಯಾದರೆ ರಸ್ತೆಗಳು ಕ್ರಾಂಕೀಟೀಕರಣಗೊಳ್ಳುತ್ತಿರುವುದರಿಂದ ನೀರು ಇಂಗದೆ ಅಂತರ್ಜಲ ಮಟ್ಟ ಕೂಡ ಕುಸಿದಿದೆ. ಇದು ಅಪಾಯದ ಮುನ್ಸೂಚನೆ ನೀಡುತ್ತಿದೆ.

ವಿಜ್ಞಾನಿಗಳು ಹೇಳುವಂತೆ ಶೇ.79ರಷ್ಟು ನೀರಿನ ಸೆಲೆಗಳನ್ನು (ಕೆರೆ-ಕಟ್ಟೆಗಳು) ನಾವು ಮುಚ್ಚಿದ್ದೇವೆ. ಶೇ.15ರಷ್ಟು ಹಸಿರು ಪ್ರದೇಶವನ್ನು ಕಾಂಕ್ರೀಟೀಕರಣ ಮಾಡಿದ್ದೇವೆ. ಇನ್ನು ಉಳಿದಿರುವಂತಹ ಶೇ.6ರಷ್ಟು ಸಸ್ಯ ಹಸಿರಿನ ನಡುವೆ ನಾವು (ಕೃಷಿ) ಬದುಕುತ್ತಿದ್ದೇವೆ.  ಮೂಲಗಳ ಪ್ರಕಾರ ಗಣನೀಯ ಪ್ರಮಾಣದಲ್ಲಿ ಬೆಳೆಯುತ್ತಿರುವ ಬೆಂಗಳೂರನ್ನು ನಾವು ಮುಂದೆ ಅಪಾಯದ ನಗರಿ ಎಂದು ಹೇಳಬೇಕಾದಂತಹ ಪರಿಸ್ಥಿತಿ ತಲೆದೋರಬಹುದು.

ಕೆಲವರು ಈಗಾಗಲೇ ಬೆಂಗಳೂರು ತನ್ನ ನೈಜತೆಯನ್ನು ಕಳೆದುಕೊಂಡಿದೆ ಎಂದು ಹೇಳುತ್ತಿದ್ದಾರೆ. ಆದರೆ, ವಿಜ್ಞಾನಿಗಳು ಸತ್ತೇ ಹೋಗಿದೆ ಎಂದು ಹೇಳುತ್ತಾರೆ. ಕಳೆದ 1970ಕ್ಕೆ ಹೋಲಿಸಿದರೆ ಆಗಿನ ಹಸಿರುಮಯ ವಾತಾವರಣದಲ್ಲಿ ಶೇ.90ರಷ್ಟು ನಾಶವಾಗಿದೆ. 261 ಕೆರೆಗಳು ಇತ್ತು ಎಂದು ಹೇಳಲಾಗುತ್ತಿತ್ತು. ಆದರೆ, ಇಂದು ಅವು 30ಕ್ಕೆ ಇಳಿದಿವೆ. ಅಲ್ಲಿ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತಿವೆ. ಅಲ್ಲಿನ ಜನ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕಲ್ಪಿಸಲಾಗಿರುವ ಕುಡಿಯುವ ನೀರಿನ ಸಂಪರ್ಕ ಸರಿಯಾಗಿಲ್ಲ. ತ್ಯಾಜ್ಯ ನೀರು ಸಂಪರ್ಕವೂ ಇಲ್ಲ. , ಭೂಮಿ ಒಳಗೆ ಅಳವಡಿಸಿರುವ ವಿದ್ಯುತ್ ಹಾಗೂ ಕೆಲವು ಅಂತರ್ಜಾಲ ಒಪಿಟಿ ಕೇಬಲ್‍ಗಳಿಂದಾಗಿ ಪರಿಸರಕ್ಕೆ ಭಾರೀ ಹೊಡೆತ ಬೀಳುತ್ತಿದೆ.

Facebook Comments

Sri Raghav

Admin