ಆ.21 ರಂದು ಸಂಭವಿಸಲಿದೆ ಶತಮಾನದ ಸೂರ್ಯಗ್ರಹಣ

ಈ ಸುದ್ದಿಯನ್ನು ಶೇರ್ ಮಾಡಿ

Solar--01

ಮಿಯಾಮಿ, ಆ.19- ಸುಮಾರು ಒಂದು ಶತಮಾನದ ಬಳಿಕ ಉತ್ತರ ಅಮೆರಿಕ ಖಂಡದಲ್ಲಿ ಆ.21 ಸೋಮವಾರ ಪ್ರಥಮ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಇದನ್ನು ಗ್ರೇಟ್ ಅಮೆರಿಕನ್ ಸೋಲಾರ್ ಎಕ್ಲಿಪ್ಸ್ ಎಂದು ಬಣ್ಣಿಸಲಾಗಿದೆ. ಈ ಅಪೂರ್ವ ವಿದ್ಯಮಾನದ ಅಂಗವಾಗಿ ಅಮೆರಿಕದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೂರ್ಯಗ್ರಹಣದ ಸಮಯದಲ್ಲೇ ಹಲವು ಜೋಡಿಗಳು ವಿವಾಹವಾಗಲು ನಿರ್ಧರಿಸಿವೆ.

ಅಮೆರಿಕದ 14 ರಾಜ್ಯಗಳಲ್ಲಿ ಸೂರ್ಯಗ್ರಹಣದ ಪೂರ್ಣ ಪ್ರಮಾಣದ ಪರಿಣಾಮಗಳು ಕಂಡುಬರುತ್ತವೆ. ಇಲ್ಲಿ ಸೂರ್ಯನ ಬೆಳಕೂ ಸ್ವಲ್ಪವೂ ಭೂಮಿಗೆ ಬರದಂತೆ ಚಂದ್ರ ತಡೆಯುತ್ತಾನೆ. ದೇಶದ ಹೆಚ್ಚಿನ ಭಾಗದ ಜನರಿಗೆ ಈ ಗ್ರಹಣ ಸುಲಭದಲ್ಲಿ ನೋಡಲು ಸಾಧ್ಯವಾಗುತ್ತದೆ ಎಂದು ಫ್ಲಾರಿಡಾದ ಇಂಟರ್‍ನ್ಯಾಷನಲ್ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿ ಜೇಮ್ಸ್ ವೆಬ್ ತಿಳಿಸಿದ್ದಾರೆ.

ಬರಿಗಣ್ಣಿನಲ್ಲಿ ವೀಕ್ಷಣೆ ಅಪಾಯ:

ಬರಿಗಣ್ಣಿನಿಂದ ಖಗ್ರಾಸ ಸೂರ್ಯಗ್ರಹಣವನ್ನು ನೋಡಿದರೆ ಅಪಾಯ. ಇದರಿಂದ ಕಣ್ಣಿನ ರೆಟಿನಾ (ಅಕ್ಷಿಪಟಲ) ಸುಟ್ಟು ಹೋಗಬಹುದು ಅಥವಾ ಕಣ್ಣಿನಲ್ಲಿ ಶಾಶ್ವತ ಅಂಧತ್ವ ಕಲೆಗಳು ಉಂಟಾಗಬಹುದು ಎಂದು ಪರಿಣಿತರು ಎಚ್ಚರಿಕೆ ನೀಡಿದ್ದಾರೆ.

Facebook Comments

Sri Raghav

Admin