ಇದೇ 22ರಂದು ನೂತನ ಸಚಿವರ ಪ್ರಮಾಣ ವಚನ

ಈ ಸುದ್ದಿಯನ್ನು ಶೇರ್ ಮಾಡಿ

Ministers-New

ಬೆಂಗಳೂರು, ಆ.19- ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿದ್ದು, ಇದೇ 22ರ ಮಂಗಳವಾರದಂದು ನೂತನ ಸಚಿವರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆ.21ರಂದು ವಿಧಾನಪರಿಷತ್‍ನ ಉಪ ಚುನಾವಣೆಗೆ ಸಿ.ಎಂ.ಇಬ್ರಾಹಿಂ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಹಾಗೂ ಅಂದು ಅಮಾವಾಸ್ಯೆ ಇರುವುದರಿಂದ 22ರಂದು ನೂತನ ಸಚಿವರ ಪ್ರಮಾಣವಚನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.

ಹಿರಿಯ ಮುಖಂಡರಾದ ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ್, ಷಡಕ್ಷರಿ ಸಚಿವರಾಗುವುದು ಖಚಿತವಾಗಿದ್ದು, ಈ ಮೂವರು ಅಂದು ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಸಚಿವ ಸಂಪುಟ ವಿಸ್ತರಣೆಗೆ ಕಾಲ ನಿಗದಿಯಾಗಿತ್ತು. ಆದರೆ, ತುಮಕೂರಿನಲ್ಲಿ ಬೃಹತ್ ಕಾರ್ಯಕ್ರಮ ಇದ್ದುದ್ದರಿಂದ ಇದನ್ನು ಮುಂದೂಡಲಾಗಿತ್ತು. 21ಕ್ಕೆ ನೂತನ ಸಚಿವರ ಪ್ರಮಾಣವಚನ ಎಂದು ಹೇಳಲಾಗಿತ್ತಾದರೂ ಅಂದು ಅಮವಾಸ್ಯೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಒಟ್ಟಾರೆ ಆ.22ರಂದು ಖಾಲಿ ಉಳಿದಿರುವ ಮೂರು ಸಚಿವ ಸ್ಥಾನಗಳು ಭರ್ತಿಯಾಗಲಿವೆ. ಯಾರಿಗೆ ಯಾವ ಖಾತೆ ಎಂಬುದು ಅಂದು ನಿರ್ಧಾರವಾಗಲಿದೆ.

Facebook Comments

Sri Raghav

Admin