ಇನ್ಫೋಸಿಸ್ ಸಿಇಒ ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

Vishal-Sikka-101

ನವದೆಹಲಿ, ಆ.19- ಭಾರತದ ಎರಡನೇ ಬೃಹತ್ ಐಟಿ ಸೇವೆಗಳ ಸಂಸ್ಥೆಯಾದ ಬೆಂಗಳೂರು ಮೂಲದ ಇನ್ಫೋಸಿಸ್ ವ್ಯವಸ್ಥಾಪಕ(ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ ವಿಶಾಲ್‍ಸಿಕ್ಕಾ ರಾಜೀನಾಮೆ ನೀಡಿದ್ದಾರೆ. ಅವರನ್ನು ಕಾರ್ಯಕಾರಿ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಸಂಸ್ಥೆಯ ಮುಖ್ಯ ಕಾರ್ಯಕಾರಿ ಅಧಿಕಾರಿ (ಸಿಒಒ) ಯು.ಬಿ.ಪ್ರವೀಣ್ ರಾವ್ ಅವರನ್ನು ಹಂಗಾಮಿ ಎಂಡಿ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿದೆ.
ಡಾ. ವಿಶಾಲ್ ಸಿಕ್ಕಾ ಅವರು ಕಂಪನಿಯ ಎಂಡಿ ಮತ್ತು ಸಿಒಒ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇನ್ಫೋಸಿಸ್ ಲಿಮಿಟೆಡ್ ಆಡಳಿತ ಮಂಡಳಿ ನಿರ್ದೇಶಕರು ಇಂದು ಸ್ವೀಕರಿಸಿದ್ದಾರೆ ಎಂದು ಸಂಸ್ಥೆ ಹೇಳಿದೆ. ನಿರಂತರ ಕಾರ್ಯಭಂಗ ಮತ್ತು ಅಡಚಣೆಗಳಿಂದಾಗಿ ವಿಶಾಲ್ ಸಿಕ್ಕಾ ಈ ಎರಡೂ ಉನ್ನತ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

Facebook Comments

Sri Raghav

Admin