ಎನ್‍ಡಿಎ ಜೊತೆ ಜೆಡಿಯು ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

JDU-Nitish-Kumar-Modi

ಪಾಟ್ನಾ, ಆ.19-ನಿರೀಕ್ಷೆಯಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ನೇತೃತ್ವದಲ್ಲಿ ಸಂಯುಕ್ತಾ ಜನತಾ ದಳ (ಜೆಡಿಯು) ರಾಷ್ಟ್ರಮಟ್ಟದಲ್ಲಿ ಎನ್‍ಡಿಎ ಜೊತೆ ಸೇರ್ಪಡೆಯಾಗುವ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜಧಾನಿ ಪಾಟ್ನಾದಲ್ಲಿ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಜೆಡಿಯು ನಾಯಕ ಶರದ್ ಯಾದವ್ ತೀವ್ರ ಪ್ರತಿಭಟನೆ ನಡುವೆಯೂ ನಿತೀಶ್‍ಕುಮಾರ್ ಬಣ ಎನ್‍ಡಿಎ ಜೊತೆ ಕೈ ಜೋಡಿಸಿದೆ. ಈಗಾಗಲೇ ರಾಜ್ಯದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆಯಾಗಿದೆ.

ಎನ್‍ಡಿಎ ಜೊತೆ ಕೈ ಜೋಡಿಸಿರುವ ಜೆಡಿಯುಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಎರಡು ಸಚಿವ ಸ್ಥಾನಗಳು ಲಭಿಸುವ ನಿರೀಕ್ಷೆ ಇದೆ.  ನಿತೀಶ್‍ಕುಮಾರ್ ವಿರುದ್ಧ ತಿರುಗಿಬಿದ್ದಿರುವ ಶರದ್ ಯಾದವ್‍ಗೆ ಕಾಂಗ್ರೆಸ್ ಸೇರಿದಂತೆ 17 ಪಕ್ಷಗಳು ಬೆಂಬಲ ನೀಡಿರುವ ಸಂದರ್ಭದಲ್ಲೇ ಜೆಡಿಯು ಎನ್‍ಡಿಎ ಜೊತೆ ಸೇರ್ಪಡೆಯಾಗಿ ತಿರುಗೇಟು ನೀಡಿದೆ.

Facebook Comments

Sri Raghav

Admin