ಚಿನ್ನ ಗೆದ್ದು ದೇಶಕ್ಕೆ ಕೀರ್ತಿ ತಂದ ಕುಬ್ಜರನ್ನು ನಿರ್ಲಕ್ಷಿಸಿದ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Govt--01

ಬೆಂಗಳೂರು, ಆ.19- ನಾವು ಹೊರದೇಶಗಳಿಗೆ ನಮ್ಮ ಸ್ವಂತ ಖರ್ಚಿನಲ್ಲೇ ಹೋಗಿ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಗಳಿಸುವ ಮೂಲಕ ದೇಶಕ್ಕೆ ಕೀರ್ತಿ ತಂದಿದರೂ ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿದೆ. ನಮಗೆ ನೀಡಬೇಕಾದ ಯಾವ ಸೌಲಭ್ಯಗಳನ್ನು ನೀಡಿಲ್ಲ ಎಂದು ಕುಬ್ಜರ ಕ್ರೀಡಾ ಒಕ್ಕೂಟ ತೀವ್ರ ಅಸಾಮಾದಾನ ವ್ಯಕ್ತಪಡಿಸಿದೆ.

ಈ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಬ್ಜರ ಕ್ರೀಟಾ ಒಕ್ಕೂಟದ ಅಧ್ಯಕ್ಷ ಸಿ.ವಿ.ರಾಜಣ್ಣ ಅವರು ಸರ್ಕಾರ ಈ ಕೂಡಲೇ ನಮಗೆ ನೀಡಬೇಕಾಗಿರುವ ಸೌವಲತ್ತುಗಳನ್ನು ನೀಡಬೇಕೆಂದು ಆಗ್ರಹಿಸಿದರು. ಇತ್ತೀಚೆಗೆ ಕೆನಡಾದಲ್ಲಿ ನಡೆದ ವಿಶ್ವ ಕುಳ್ಳರ ಕ್ರೀಡಾಕೂಟದಲ್ಲಿ ಭಾರತದಿಂದ ಒಟ್ಟು 21 ಜನ ಭಾಗವಹಿಸಿದ್ದೆವು. ಅದರಲ್ಲಿ ನಾವು ಕರ್ನಾಟಕದ 7 ಜನರೂ ಇದ್ದೆವು.  ಕ್ರೀಡಾಕೂಟಕ್ಕೆ ತೆರಳುವಾಗ ನೀವು ನಿಮ್ಮ ಖರ್ಚಿನಲ್ಲೇ ಹೋಗಿಬನ್ನಿ, ನೀವು ಬಂದಮೇಲೆ ಅದನ್ನು ನಿಮಗೆ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಆ.4ರಿಂದ 12ರವರೆಗೆ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ನಾವು ಚಿನ್ನದ ಪದಕಗಳನ್ನು ಗೆದ್ದು ತಂದ್ದಿದ್ದೆವೆ ಆದರೆ ಸರ್ಕಾರ ನಮ್ಮತ್ತ ತಿರುಗಿಯೂ ನೋಡಿಲ್ಲ ಎಂದು ಅವರು ಹೇಳಿದರು.

ಇತರರು ಕ್ರೀಡೆಗಳಲ್ಲಿ ಭಾಗವಹಿಸಿದರೆ ಸರ್ಕಾರ ಅವರಿಗೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ ಮತ್ತು ಅವರಿಗೆ ಏನೆಲ್ಲಾ ಅನುಕೂಲತೆಗಳನ್ನು ಒದಗಿಸುತ್ತಿದೆ. ಆದರೆ ನಮ್ಮನು ಈ ರೀತಿ ಕಡೆಗಣಿಸುವುದು ನಮ್ಮ ಮನಸ್ಸಿಗೆ ನೋವುಂಟು ಮಾಡಿದೆ. ನಮಗೆ ಬಹುಮಾನ ಕೊಡುವುದಿರಲಿ, ಹೋಗಿಬಂದ ಖರ್ಚನ್ನು ಸರ್ಕಾರ ಕೊಡದಿದ್ದರೆ ಹೇಗೆ, ಹೋಗಿಬರುವ ವೆಚ್ಚ ಕೊಡುವುದಾಗಿ ಹೇಳಿದ್ದ ಸರ್ಕಾರವೇ ಈ ರೀತಿ ನಮ್ಮನ್ನು ನಿರ್ಲಕ್ಷಿಸಿದರೆ ನಾವು ಯಾರಿಗೆ ದೂರಬೇಕು ಎಂದು ಅವರು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ದೇವಪ್ಪ ಮೋರ್, ನಾಗೇಶ್. ಎನ್, ಶಾಂತಕುಮಾರ್, ಸಿಮ್ರಾನ್, ಪ್ರಕಾಶ್ ಬೊಶಿಯ, ಮತ್ತಿತರರಿದ್ದರು.

Facebook Comments

Sri Raghav

Admin