ದಕ್ಷಿಣ ಪೆಸಿಫಿಕ್ ದ್ವೀಪರಾಷ್ಟ್ರ ಫಿಜಿಯಲ್ಲಿ ಭಾರೀ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

Earthquake--01

ವೆಲ್ಲಿಂಗ್ಟನ್, ಆ.19- ದಕ್ಷಿಣ ಪೆಸಿಫಿಕ್ ದ್ವೀಪರಾಷ್ಟ್ರ ಫಿಜಿಯಲ್ಲಿ ಇಂದು ಭಾರೀ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ತಜ್ಞರು ಹೇಳಿದ್ದಾರೆ. ಆದರೆ ಭೂಕಂಪವು ಬಹಳ ಆಳವಾಗಿ ಸಂಭವಿಸಿದ ಕಾರಣ ಸಾವು-ನೋವು ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.4ರಷ್ಟು ದಾಖಲಾಗಿದೆ.

ಮುಂಜಾನೆ 3 ಗಂಟೆಯಲ್ಲಿ ಭೂಕಂಪ ಸಂಭವಿಸಿದೆ. ಸುವಾ ಪ್ರದೇಶದಿಂದ ಪೂರ್ವಕ್ಕೆ 287 ಮೈಲಿಗಳ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಭೂಮಿಯಿಂದ 538 ಕಿ.ಮೀ. ಆಳದ ಒಳಗೆ ಇತ್ತು ಎಂದು ಅಮೆರಿಕದ ಭೂಗರ್ಭ ಸಮೀಕ್ಷೆ ಕೇಂದ್ರ (ಯುಎಸ್‍ಜಿಎಸ್) ತಿಳಿಸಿದೆ. ಹವಾಯಿ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಸುನಾಮಿ ಅಪ್ಪಳಿಸುವ ಯಾವುದೇ ಎಚ್ಚರಿಕೆ ನೀಡಿಲ್ಲ.

Facebook Comments

Sri Raghav

Admin