ನಾಲ್ಕು ರಾಜ್ಯಗಳಲ್ಲಿ ಭೀಕರ ಪ್ರವಾಹ, ಸತ್ತವರ ಸಂಖ್ಯೆ 210ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Untitled-3

ಪಾಟ್ನಾ/ಲಕ್ನೋ/ಗುವಾಹತಿ/ಕೊಲ್ಕತ ಆ.19-ಬಿಹಾರ, ಉತ್ತರಪ್ರದೇಶ, ಅಸ್ಸಾಂ ಮತ್ತು ಪಶ್ಚಿಮಬಂಗಾಳ ರಾಜ್ಯಗಳ ವಿವಿಧೆಡೆ ಪ್ರವಾಹದ ರೌದ್ರಾವತಾರಕ್ಕೆ ಈವರೆಗೆ 210ಕ್ಕೂ ಹೆಚ್ಚು ಮಂದಿ ಮೃತಪಟ್ಟು, 1.5 ಕೋಟಿ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಹಾರದಲ್ಲಿ 156, ಉತ್ತರಪ್ರದೇಶದಲ್ಲಿ 42, ಅಸ್ಸಾಂನಲ್ಲಿ 62 ಹಾಗೂ ಪಶ್ಚಿಮ ಬಂಗಾಳದಲ್ಲಿ 52 ಮಂದಿ ಮೃತಪಟ್ಟಿದ್ದಾರೆ. ಈ ನಾಲ್ಕು ರಾಜ್ಯಗಳಲ್ಲಿ 66 ಜಿಲ್ಲೆಗಳು ಭಾರೀ ಮಳೆ ಮತ್ತು ನೆರೆ ಹಾವಳಿಯಿಂದ ತತ್ತರಿಸಿವೆ. ಸಾವಿರಾರು ಹಳ್ಳಿಗಳು ಪ್ರವಾಹ ಪೀಡಿತವಾಗಿದ್ದು, ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿವೆ. ಈ ಜಿಲ್ಲೆಗಳ ಬಹುತೇಕ ನದಿಗಳು ಪ್ರವಾಹದಿಂದ ಭೋರ್ಗರೆಯುತ್ತಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿವೆ.

ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಸೇನೆಯನ್ನು ನಿಯೋಜಿಸಲಾಗಿದ್ದು, ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಭಾರತ, ನೇಪಾಳ, ಬಾಂಗ್ಲಾದಲ್ಲಿ 2 ಕೋಟಿ ಮಂದಿ ಸಂಕಷ್ಟದಲ್ಲಿ :

ಭಾರತ, ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ 2 ಕೋಟಿ ಮಂದಿ ಪ್ರವಾಹದ ದವಡೆಗೆ ಸಿಲುಕಿದ್ಧಾರೆ ಎಂದು ಅಂತಾರಾಷ್ಟ್ರೀಯ ರೆಡ್‍ಕ್ರಾಸ್ ಫೆಡರೇಷನ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳು ಹೇಳಿಕೆ ನೀಡಿವೆ. ಈ ಮೂರು ದೇಶಗಳಲ್ಲಿ ಲಕ್ಷಾಂತರ ನಿರ್ವಸಿತರ ಅಗತ್ಯಗಳನ್ನು ಪೂರೈಸಲು ತಕ್ಷಣ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಈ ಸಂಸ್ಥೆಗಳು ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಹೇಳಿಕೆ ನೀಡಿವೆ.

800x480_6ef596e1d0d26b49c83a3f611acf776f

60121811

726139274-flood-6_6

bihar-flood-katihar-759

flood_bihar_760_1503061807_618x347

Flood-l-reuters

 

 

Facebook Comments

Sri Raghav

Admin