ಪ್ರವಾಹದ ನಡುವೆಯೂ ಬಿಹಾರ, ಉ.ಪ್ರ, ಅಸ್ಲಾಂ, ಪ.ಬಂಗಾಳದಲ್ಲಿ ಮಳೆ ಕೊರತೆ

ಈ ಸುದ್ದಿಯನ್ನು ಶೇರ್ ಮಾಡಿ

india-flood-weather_927d6f94-71ff-11e7-a55a-ab3ca1304be3

ನವದೆಹಲಿ, ಆ.19- ಬಿಹಾರ, ಉತ್ತರಪ್ರದೇಶ, ಅಸ್ಲಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ವರುಣನ ಆರ್ಭಟ ಮತ್ತು ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದ್ದರೂ, ಒಟ್ಟಾರೆಯಾಗಿ ಆಗಷ್ಟ್ ನಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ.24ರಷ್ಟು ಕಡಿಮೆ ಮಳೆ ಸುರಿದಿದೆ. ಭಾರತದ ಕೇಂದ್ರ ಭಾಗದಲ್ಲಿ ಹಲವು ದಿನಗಳಿಂದ ಮಳೆಯಾಗದೇ ಇರುವುದು ಇದಕ್ಕೆ ಕಾರಣ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೇಂದ್ರ ಭಾರತದಲ್ಲಿ ಆಗಷ್ಟ್ ನಲ್ಲಿ ಶೇ.58ರಷ್ಟು ಮಳೆ ಕೊರತೆ ಕಂಡುಬಂದಿದ್ದರೆ, ಈಶಾನ್ಯ ಭಾರತದಲ್ಲಿ ಶೇ.37ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ಭಾರತದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ. ದೇಶಾದ್ಯಂತ ದೀರ್ಘಾವಧಿ ಮಳೆ ಕೊರತೆ ಪ್ರಮಾಣ ಶೇ.5ರಷ್ಟಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಮಳೆ ಕೊರತೆ ಇರುವ ಪ್ರದೇಶದಲ್ಲಿ ಮುಂಗಾರು ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

Facebook Comments

Sri Raghav

Admin