ಬಿಟ್ಟಿ ಕುದುರೆ ಕಟ್ಟಿದೋನೆ ಜಾಣ..! : ಮೂಡಿಗೆರೆ ಬಳಿ ವಾರಸುದಾರನಿಲ್ಲದ ಅಶ್ವಗಳು ಪ್ರತ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

Hors---01

ಚಿಕ್ಕಮಗಳೂರು, ಆ.19- ಜಿಲ್ಲೆಯ ಮೂಡಿಗೆರೆ ಸಮೀಪ ಕಾಫಿ ಎಸ್ಟೇಟ್‍ನಲ್ಲಿ ಇದ್ದಕ್ಕಿದಂತೆ ಕೆಲವು ಕುದುರೆಗಳು ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಕುದುರೆಗಳು ಈ ರೀತಿ ವಾರಸುದಾರರಿಲ್ಲದೆ ಇರುವುದು ಅಪರೂಪ. ಸುಮಾರು ಹತ್ತಕ್ಕೂ ಕುದುರೆಗಳು ಈ ರೀತಿ ಕಂಡುಬಂದಿದ್ದು, ಎಲ್ಲಾ ಕುದುರೆಗಳು ದಷ್ಟಪುಸ್ಟವಾಗಿ ಆರೋಗ್ಯದಿಂದಿವೆ. ಈ ಕುದುರೆಗಳನ್ನು ಯಾರಾದರು ಇಲ್ಲಗೆ ತಂದು ಬಿಟ್ಟು ಹೋಗಿರಬಹುದೇ ? ಬಿಟ್ಟು ಹೋಗಿದ್ದಾರೆ ಎಂದರೂ ಕೂಡ ಯಾವುದೇ ಐಬುಗಳಿಲ್ಲದೆ ಚೆನ್ನಾಗಿರುವ ಕುದುರೆಗಳನ್ನು ಯಾಕಾಗಿ ಬಿಟ್ಟು ಹೋಗಿದ್ದಾರೆ ? ಎಂಬ ಪ್ರಶ್ನೆಗಳು ಸಾರ್ವಜನಿಕರ ತಲೆ ತಿನ್ನತೊಡಗಿವೆ.

ಇನ್ನೂ ಕೆಲವರು ಆರೋಗ್ಯವಾಗಿ ಚೆನ್ನಾಗಿದ್ದು, ಬೆಲೆ ಬಾಳುವ ಕುದುರೆಗಳು ಸಿಕ್ಕಿದ್ದೆ ಸಾಕು ಎಂದು ಒಬ್ಬೊಬ್ಬರು ಎರಡು ಮೂರು ಕುದುರೆಗಳನ್ನು ಹಗ್ಗದಿಂದ ಕಟ್ಟಿ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಘಟನೆ ಇಲ್ಲಿನ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಕುದುರೆಗಳನ್ನು ನೋಡಲು ಜನ ಬಂದು ಸೇರುತ್ತಿದ್ದಾರೆ. ಇಷ್ಟಾದರೂ ಅರಣ್ಯ ಇಲಾಖೆಯವರು ಇದುವರೆಗೂ ಈ ಕಡೆ ಸುಳಿದಿಲ್ಲ ಎಂದು ಕೆಲವರು ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಈ ಕುದುರೆಗಳು ಸಾಕಿದ ಕುದುರೆಗಳು ಎಂಬುದು ಅವುಗಳ ವರ್ತನೆಯಿಂದಲೇ ತಿಳಿದುಬರುತ್ತಿದೆ. ಕುದುರೆ ಸಾಕಿದವರು ಇವುಗಳನ್ನು ಇಲ್ಲಿ ತಂದು ಅಡವಿ ಪಾಲು ಮಾಡಿ ಹೋಗಿರುವುದು ನಿಜಕ್ಕೂ ಅಚ್ಚರಿ ವಿಷಯವೇ ಆಗಿದೆ. ಕೆಲವು ಸ್ಥಳೀಯರು ಹೇಳುವ ಪ್ರಕಾರ ಇವು ಸಾಕಿದ ಕುದುರೆಗಳೇ ಎಲ್ಲಾ ಕುದುರೆಗಳು ಚೆನ್ನಾಗಿದ್ದು, ಒಂದು ಕುದುರೆ ಮಾತ್ರ ಕಾಲು ನೋವಿನಿಂದ ನಡೆಯಲಾರದೆ ಕುಂಟುತ್ತಿದೆಯಂತೆ. ಇನ್ನು ಆರೋಗ್ಯವಾಗಿರುವ ಇತರೆ ಎಲ್ಲ ಕುದುರೆಗಳನ್ನು ಈಗಾಗಲೇ ಕೆಲವರು ತೆಗೆದುಕೊಂಡು ಹೋಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಈ ಕುದುರೆ ರಹಸ್ಯವನ್ನು ಬಯಲು ಮಾಡಬೇಕಾಗಿದೆ.

Facebook Comments

Sri Raghav

Admin