ಮರಳು ಮಾಫಿಯಾ ಅಟ್ಟಹಾಸ : ಇನ್ಸ್ ಪೆಕ್ಟರ್ ಹತ್ಯೆಗೆ ವಿಫಲ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Sand-Import--01

ಬಳ್ಳಾರಿ, ಆ.19- ರಾಜ್ಯದ ವಿವಿಧೆಡೆಗಳಲ್ಲಿ ಅಕ್ರಮ ಮರಳು ಸಾಗಾಟದಾರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದು ಬಳ್ಳಾರಿಯಲ್ಲಿ ಜಿಲ್ಲಾ ಮೀಸಲು ಪಡೆ ಪೊಲೀಸ್ ಇನ್ಸ್‍ಪೆಕ್ಟರ್ (ಆರ್‍ಪಿಐ) ಒಬ್ಬರನ್ನು ವಾಹನ ಮೇಲೆ ಹತ್ತಿಸಿ ಹತ್ಯೆ ಮಾಡುವ ಯತ್ನ ನಡೆದಿದೆ. ಈ ಘಟನೆಯಲ್ಲಿ ಗಾಯಗೊಂಡ ರಿಸರ್ವ್ ಪೊಲೀಸ್ ಇನ್ಸ್‍ಪೆಕ್ಟರ್ ಸರದಾರ್ ಅವರ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರ ಸಮೀಪದ ಹಗರಿ ನದಿಯಿಂದ ಅಕ್ರಮವಾಗಿ ಬೊಲೆರೋ ವಾಹನದಲ್ಲಿ ಮರಳು ಸಾಗಿಸಲಾಗುತ್ತಿತ್ತು. ಈ ಸಂದರ್ಭ ಅದನ್ನು ತಡೆಯಲು ಹೋದ ಆರ್‍ಪಿಐ ಸರದಾರ್ ಅವರ ಮೇಲೆ ವಾಹನ ಹತ್ತಿಸಿದ ಚಾಲಕ ಅವರ ಹತ್ಯೆಗೆ ವಿಫಲ ಯತ್ನ ನಡೆಸಿದ್ದಾನೆ. ಬಳ್ಳಾರಿ ಹೊರ ವಲಯದ ಆಟೋ ನಗರದಲ್ಲಿ ಈ ಘಟನೆ ನಡೆದಿದ್ದು, ಬೊಲೆರೋ ವಾಹನ, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Facebook Comments

Sri Raghav

Admin