ಮಳೆಗೆ ಪಾರಂಪರಿಕ ಕಟ್ಟಡ ಕುಸಿತ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ.19-ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಪಾರಂಪರಿಕ ಕಟ್ಟಡ ಕುಸಿದುಬಿದ್ದಿದೆ. ನಗರದ ಡಿ.ಸುಬ್ಬಯ್ಯ ರಸ್ತೆಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಆವರಣದಲ್ಲಿದ್ದ ಪಾರಂಪರಿಕ ಕಟ್ಟಡ ಕುಸಿದು ಬಿದ್ದು ಬೈಕೊಂದು ಜಖಂಗೊಂಡಿದೆ. ನೂರಕ್ಕೂ ಹೆಚ್ಚು ವರ್ಷದ ಈ ಪಾರಂಪರಿಕ ಕಟ್ಟಡ ಕಳೆದ 15 ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿ ಪಾಳುಬಿದ್ದಿತ್ತು. ಕಟ್ಟಡದ ಗೋಡೆ ಶಿಥಿಲಗೊಂಡಿದ್ದು, ಯಾರೂ ಇಲ್ಲಿ ವಾಸವಿರಲಿಲ್ಲ.
ನಗರದಲ್ಲಿ ಕಳೆದ 3 ದಿನಗಳಿಂದ ಸುರಿದ ಭಾರೀ ಮಳೆಗೆ ನಿನ್ನೆ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಅಧೀಕ್ಷಕ ರಂಗನಾಥ್ ಎಂಬುವರ ಬೈಕ್ ಮೇಲೆ ಗೋಡೆ ಬಿದ್ದು ಜಖಂಗೊಂಡಿದೆ.

Facebook Comments

Sri Raghav

Admin