44,000 ಮೆಷಿನ್ ಗನ್ ಆರ್ಡರ್ ಕ್ಯಾನ್ಸಲ್

ಈ ಸುದ್ದಿಯನ್ನು ಶೇರ್ ಮಾಡಿ

Gus--01

ನವದೆಹಲಿ, ಆ.19- ಭೂಸೇನಾ ಪಡೆಯನ್ನು ಆಧುನೀಕರಣಗೊಳಿಸುವ ಯೋಜನೆಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಪದಾತಿದಳದ ಯೋಧರಿಗೆ 44,000 ಹಗುರ ಸ್ವಯಂಚಾಲಿತ ಬಂದೂಕುಗಳನ್ನು (ಲೈಟ್ ಮೆಷಿನ್ ಗನ್ ಅಥವಾ ಎಲ್‍ಎಂಜಿ) ಖರೀದಿಸುವ ಪ್ರಸ್ತಾವವನ್ನು ರಕ್ಷಣಾ ಸಚಿವಾಲಯ ರದ್ದುಗೊಳಿಸಿದೆ.  ಕಳೆದ ಎರಡು ವರ್ಷಗಳಲ್ಲಿ ರದ್ದುಗೊಳಿಸಲಾದ ಇಂಥ ಮೂರನೇ ಯೋಜನೆ ಇದಾಗಿದೆ. ಟ್ಯಾಂಕ್‍ಗಳು ಮತ್ತು ಹೋವಿಟ್ಜರ್ ಫಿರಂಗಿಗಳಂಥ ದೊಡ್ಡ ಶಸ್ತ್ರಾಸ್ತ್ರಗಳನ್ನು ಹೊಂದುವಲ್ಲಿ ಆಸಕ್ತಿ ತೋರಲಾಗಿದ್ದು, ಪದಾತಿಸೈನ್ಯಕ್ಕೆ ಅಗತ್ಯವಿರುವ ಮೂಲ ಶಸ್ತ್ರಾಸ್ತ್ರಗಳನ್ನು ಪೂರೈಸಲು ಉಪೇಕ್ಷೆ ಮಾಡಲಾಗುತ್ತಿದೆ ಎಂಬುದು ಇದರಿಂದ ಸಾಬೀತಾಗುತ್ತದೆ.

ಶಸ್ತ್ರಾಸ್ತ್ರಗಳು (ಎಲ್‍ಎಂಜಿ), ಗುಂಡು ನಿರೋಧಕ ಜಾಕೆಟ್‍ಗಳು, ಸೂಕ್ತ ರಕ್ಷಣಾ ವಸ್ತ್ರಗಳು, ಶಿರಸ್ತ್ರಾಣಗಳಂಥ ಮೂಲ ಆಯುಧಗಳೊಂದಿಗೆ ಕಾಲಾಳುಗಳನ್ನು ಸಜ್ಜುಗೊಳಿಸಲು ನಿರ್ಲಕ್ಷ ತೋರಲಾಗುತ್ತಿದೆ ಎಂಬ ಅಸಮಾಧಾನವೂ ಉಲ್ಬಣಗೊಂಡಿದೆ. ಇಸ್ರೇಲ್ ಕಂಪನಿಯೊಂದಿಗೆ 7.62 ಮಿ.ಮೀ. ಕ್ಯಾಲಿಬರ್ ಎಲ್‍ಎಂಜಿಗಳನ್ನು ಖರೀದಿಸುವ ಟೆಂಡರ್‍ನನ್ನು ರಕ್ಷಣಾ ಸಚಿವಾಲಯ ರದ್ದುಗೊಳಿಸಿದ್ದು, ಬದಲಿಗೆ ಅದೇ ದೇಶದಿಂದ ಅತ್ಯಾಧುನಿಕ ಯುದ್ಧ ವಿಮಾನಗಳು, ಹೆಲಿಕಾಪ್ಟರ್‍ಗಳು ಹಾಗೂ ಟ್ಯಾಂಕ್‍ಗಳನ್ನು ಕೊಳ್ಳಲು ಇಲಾಖೆ. ಒಪ್ಪಂದ ಮಾಡಿಕೊಂಡಿದೆ.

Facebook Comments

Sri Raghav

Admin