45 ವರ್ಷಗಳ ಬಳಿಕ ಲಂಕಾ ನೌಕಾಪಡೆಗೆ ತಮಿಳು ಮುಖ್ಯಸ್ಥ

Srilamka

ಕೊಲೊಂಬೊ, ಆ.19-ದ್ವೀಪರಾಷ್ಟ್ರ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅಲ್ಪಸಂಖ್ಯಾತ ತಮಿಳು ಸಮುದಾಯಕ್ಕೆ ಸೇರಿದ ರಿಯರ್ ಅಡ್ಮಿರಲ್ ಟ್ರಾವಿಸ್ ಸಿನ್ನಯ್ಯ ಅವರನ್ನು ದೇಶದ ನೌಕಾಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ. 45 ವರ್ಷಗಳ ಬಳಿಕ ಲಂಕಾ ನೌಕಾದಳಕ್ಕೆ ತಮಿಳು ಮುಖ್ಯಸ್ಥರೊಬ್ಬರು ನೇಮಕಗೊಂಡಿರುವುದು ಇದೇ ಮೊದಲು. 1972ರಲ್ಲಿ ಎಲ್‍ಟಿಟಿಇ (ಲಿಬರೇಷನ್ ಆಫ್ ತಮಿಳ್ ಟೈಗರ್ ಈಳಂ) ಉಗ್ರವಾದಿಗಳು ಪ್ರತ್ಯೇಕ ತಮಿಳು ರಾಜ್ಯಕ್ಕಾಗಿ ಸಶಸ್ತ್ರ ಹೋರಾಟ ಆರಂಭಿಸಿದ ಬಳಿಕ ನೌಕಾಪಡೆಯ ಮುಖ್ಯಸ್ಥರಾಗಿ ಟ್ರಾವಿಸ್ ಸಿನ್ನಯ್ಯ ನೇಮಕಗೊಂಡಿದ್ದಾರೆ.

Facebook Comments

Sri Raghav

Admin