ಉಗ್ರರ ಬೆಂಬಲಿಗರಲ್ಲಿ ನಡುಕ ಎನ್‍ಐಎ ಹುಟ್ಟಿಸಿದೆ : ರಾಜನಾಥ್‍ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Rajanath Singh 01

ಲಕ್ನೋ, ಆ.20- ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಾ ಭಯೋತ್ಪಾದನಾ ಕೃತ್ಯಗಳಿಗೆ ಬೆಂಬಲ ನೀಡುತ್ತಿರುವ ಪ್ರತ್ಯೇಕತಾವಾದಿಗಳ ಬೆನ್ನೆಲುಬಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ನಡುಕ ಹುಟ್ಟಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ಬಣ್ಣಿಸಿದ್ದಾರೆ.
ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿರುವ ಪ್ರತ್ಯೇಕತಾ ವಾದಿಗಳ ವಿರುದ್ಧ ಎನ್‍ಐಎ ನಡೆಸಿದ ಕಾರ್ಯಾಚರಣೆ ಶೇ.95ರಷ್ಟು ಯಶಸ್ವಿಯಾಗಿದೆ ಎಂದರು.

ಈಶಾನ್ಯ ಭಾರತದಲ್ಲಿ ಆತಂಕವಾದ ಮತ್ತು ದಕ್ಷಿಣ ಭಾರತದಲ್ಲಿ ನಕ್ಸಲೀಯರ ಹಾವಳಿ ಗಮನಾರ್ಹವಾಗಿ ಕಡಿಮೆಯಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಕಾಶ್ಮೀರದಲ್ಲಿ ಉಗ್ರರ ಹಟ್ಟಹಾಸಕ್ಕೆ ಪೂರ್ಣ ವಿರಾಮ ಹಾಕುವುದಾಗಿ ಹೇಳಿದರು.

Facebook Comments

Sri Raghav

Admin