ಡಾರ್ಜಿಲಿಂಗ್‍ ನಲ್ಲಿ ಕಚ್ಚಾ ಬಾಂಬ್ ಸ್ಫೋಟ, ವ್ಯಕ್ತಿ ಸಾವು, ಮೂವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Blast--.01

ಕಾಲಿಂ ಪೊಂಗ್, ಆ.20- ಕಚ್ಚಾ ಬಾಂಬ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಮೃತಪಟ್ಟು, ಪೊಲೀಸರೂ ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಗಿರಿಧಾಮ ಡಾರ್ಜಿಲಿಂಗ್‍ಗೆ ಹೊಂದಿಕೊಂಡಿರುವ ಕಾಲಿಂಪೊಂಗ್ ಜಿಲ್ಲೆಯಲ್ಲಿ ನಡೆದಿದೆ.  ನಿನ್ನೆ ರಾತ್ರಿ 10.45ರಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆಯನ್ನು ಗುರಿಯಾಗಿಟ್ಟುಕೊಂಡು ಈ ಬಾಂಬ್ ಎಸೆಯಲಾಗಿದೆ. ಡಾರ್ಜಿಲಿಂಗ್‍ನಲ್ಲಿ ಮೊನ್ನೆ ರಾತ್ರಿ ಸುಧಾರಿತ ಸ್ಫೋಟಕ ಆಸ್ಪೋಟಗೊಂಡ 24 ತಾಸುಗಳ ನಂತರ ಈ ವಿಸ್ಪೋಟ ನಡೆದಿದೆ. ಈ ಕೃತ್ಯದ ಹೀಂದೆ ಗೂರ್ಖಾ ಜನಮುಕ್ತಿ ಮೋರ್ಚಾ(ಜೆಜಿಎಂ) ಕಾರ್ಯಕರ್ತರ ಕೈವಾಡ ಇದೆ ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin