ಬಿಜೆಪಿ ಮೀಸಲಾತಿ ವಿರೋಧಿಸುವ ಪಕ್ಷ : ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

dgagadfhgdsh

ಬೆಂಗಳೂರು, ಆ.20- ಬಿಜೆಪಿ ಪಕ್ಷ ಎಂದೂ ಕೂಡ ಮೀಸಲಾತಿಯನ್ನು ಬೆಂಬಲಿಸಲಿಲ್ಲ. ಅದು ಮೀಸಲಾತಿ ವಿರುದ್ಧವಾಗಿರುವ ಪಕ್ಷ ಎಂದು ಮುಖಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ವಿಧಾನಸೌಧದಲ್ಲಿಂದು ನಡೆದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ 102ನೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂದೂ ಕೂಡ ಬಿಜೆಪಿ ಮೀಸಲಾತಿ ಪರವಾಗಿ ಹೋರಾಟ ಮಾಡಿಲ್ಲ ಎಂದರು.

ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇರಬೇಕು. ದಿ.ರಾಜೀವ್‍ಗಾಂಧಿ ಅವರು ಸಂವಿಧಾನದಲ್ಲಿ 73ಮತ್ತು 74ಕ್ಕೆ ತಿದ್ದುಪಡಿ ತಂದು ಮೀಸಲಾತಿಗೆ ಅವಕಾಶ ಮಾಡಿಕೊಟ್ಟಾಗಲು ಬಿಜೆಪಿ ಪಕ್ಷ ಬೆಂಬಲಿಸಿರಲಿಲ್ಲ. ಮಂಡಲ್ ವರದಿ ಸಂದರ್ಭದಲ್ಲಿ ಅದರ ವಿರುದ್ಧ ರಾಷ್ಟ್ರೀಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ರಥ ಯಾತ್ರೆ ಮಾಡಿದ್ದರು ಎಂದು ಟೀಕಿಸಿದರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಬದ್ಧ ಅಧಿಕಾರ ಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನು ರಾಜ್ಯ ಸರ್ಕಾರ ವಿರೋಧಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆರೋಪಿಸಿದ್ದಾರೆ. ಆದರೆ, ಜಾತಿಯನ್ನು ಸೇರಿಸುವ ಅಥವಾ ಬಿಡುವುದು ರಾಜ್ಯಗಳಿಗೆ ಇರುವ ಅಧಿಕಾರ. ಈ ಹಕ್ಕನ್ನು ಕಸಿಯುವಾಗ ಅದನ್ನು ವಿರೋಧಿಸಬಾರದೆ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್‍ನನ್ನು ಘೋಷಿತ ಆಟದ ಮೈದಾನಗಳಲ್ಲಿ ನಿರ್ಮಿಸಿಲ್ಲ. ಅಘೋಷಿತ ಪಾಲಿಕೆ ಮೈದಾನದಲ್ಲಿ ಕ್ಯಾಂಟೀನ್ ನಿರ್ಮಿಸಲಾಗಿದೆ. ಆಟದ ಮೈದಾನ ಮುಖ್ಯವೋ ಅಥವಾ ಬಡವರಿಗೆ ಅನ್ನ ಕೊಡುವುದು ಮುಖ್ಯವೋ. ಕಬ್ಬನ್ ಪಾರ್ಕ್‍ನಲ್ಲಿ ಶ್ರೀಮಂತರಿಗೆ ಕ್ಲಬ್ ಮಾಡಲಾಗಿದೆ. ಆದರೆ ಬಡವರಿಗಾಗಿ ಮೈದಾನದಲ್ಲಿ ಕ್ಯಾಂಟೀನ್ ಮಾಡಬಾರದೇ ಎಂದು ಪ್ರಶ್ನಿಸಿದರು.

Facebook Comments

Sri Raghav

Admin