ಮೇಲ್ಮನೆ ಉಪ ಚುನಾವಣೆ : ಇಬ್ರಾಹಿಂ ಅವಿರೋಧ ಆಯ್ಕೆ ಸಾಧ್ಯತೆ

CM-Ibrahim--01

ಬೆಂಗಳೂರು, ಆ.20-ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯುವ ಉಪ ಚುನಾವಣೆಗೆ ಇದುವರೆಗೂ ಯಾರೂ ನಾಮಪತ್ರ ಸಲ್ಲಿಸಿಲ್ಲ. ನಾಳೆ ಕಡೆಯ ದಿನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಈ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿರುವುದರಿಂದ ಇಬ್ರಾಹಿಂ ಆಯ್ಕೆಗೆ ಹಾದಿ ಸುಗಮವಾಗಲಿದೆ. ವಿಧಾನಪರಿಷತ್‍ನ ಮಾಜಿ ಉಪಸಭಾಪತಿ ಹಾಗೂ ವಿಧಾನಪರಿಷತ್ ಸದಸ್ಯೆ ಹಾಗಿದ್ದ ವಿಮಲಾಗೌಡ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣಾ ಆಯೋಗ ಆ.31ರಂದು ಚುನಾವಣೆ ನಡೆಸಲಿದೆ.

ಆ.14ರಂದು ಚುನಾವಣಾ ಅಧಿಸೂಚನೆ ಹೊರಡಿಸಿದ್ದು, ನಾಳೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ನಾಮಪತ್ರ ವಾಪಸ್ ಪಡೆದುಕೊಳ್ಳಲು ಆ.24 ಕಡೆಯ ದಿನವಾಗಿದೆ. ಚುನಾವಣೆ ಅಗತ್ಯ ಬಿದ್ದರೆ ಆ.31ರಂದು ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ. ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್‍ನಲ್ಲಿ ಖಾಲಿ ಇರುವ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ನಾಳೆ ಸಿ.ಎಂ.ಇಬ್ರಾಹಿಂ ನಾಪತ್ರ ಸಲ್ಲಿಸಲಿದ್ದಾರೆ.

Facebook Comments

Sri Raghav

Admin