ಮೈ ನವಿರೇಳಿಸಿದ ಬೈಕ್ ಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

Bike

ಚಿಕ್ಕಮಗಳೂರು, ಆ.20- ರೇಸಿಂಗ್ ಬೈಕ್‍ಗಳ ಬ್ರಾಂಡ್‍ಗಳಲ್ಲಿ ಮುಂಚೂಣಿಯಲ್ಲಿರುವ ಕೆಟಿಎಂ ಚಿಕ್ಕಮಗಳೂರಿನಲ್ಲಿ ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಿತ್ತು. ಚೆನ್ನೈಯಿಂದ ಆಗಮಿಸಿದ್ದ ವೃತ್ತಿಪರ ಸಾಹಸಿ ಬೈಕ್ ಚಾಲಕರು ಮೈನವಿರೇಳಿಸುವಂತೆ ಬೈಕ್ ಸಾಹಸ ಮತ್ತು ಟ್ರಿಕ್‍ಗಳನ್ನು ಪ್ರದರ್ಶಿಸಿದರು. ನಗರದ ಟೌನ್ ಮಹಿಳಾ ಹೈಸ್ಕೂಲ್‍ಆವರಣದಲ್ಲಿ ನಡೆದ ಈ ಸಾಹಸ ಪ್ರದರ್ಶನಕ್ಕೆ ನೂರಾರು ಜನರು ಸಾಕ್ಷಿಯಾದರು. ಪ್ರೇಕ್ಷಕರು ಉಸಿರು ಬಿಗಿ ಹಿಡಿಯುವಂತೆ ಕೆಟಿಎಂ ಡ್ಯೂಕ್ ಬೈಕ್‍ಗಳಲ್ಲಿ ಚಾಲಕರು ಸಾಹಸಗಳನ್ನು ಸಾದರಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಜಾಜ್ ಆಟೋ ಲಿಮಿಟೆಡ್‍ನ ಪ್ರೊಬೈಕಿಂಗ್ ವಿಭಾಗದ ಅಧ್ಯಕ್ಷರಾದ ಅಮಿತ್ ನಂದಿ ಕೆಟಿಎಂ ಬ್ರಾಂಡ್ ಅಧಿಕ ಸಾಮಥ್ರ್ಯದ ರೇಸಿಂಗ್ ಬೈಕ್‍ಗಳಿಗೆ ಹೆಸರಾಗಿದೆ. ಕೆಟಿಎಂ ಬೈಕ್‍ಗಳು ಚಾಲಕರಿಗೆ ಯಾವ ರೀತಿಯರೋಮಾಂಚಕ ಅನುಭವ ನೀಡಬಹುದುಎನ್ನುವುದನ್ನು. ಇಂಥ ಪ್ರದರ್ಶನದ ಮೂಲಕ ಸಾಬೀತುಪಡಿಸಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ವೃತ್ತಿಪರ ಸಾಹಸಿ ಸವಾರರು ಈ ಪ್ರದರ್ಶನ ನೀಡುತ್ತಿದ್ದು, ಚಿಕ್ಕಮಗಳೂರಿನಲ್ಲಿಯೂ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕೆಟಿಎಂ ಬೈಕ್ ಸಾಹಸ ನೋಡಲು ಸಾರ್ವಜನಿಕರಿಗೆ ಮುಕ್ತವಾಗಿತ್ತು. ಪ್ರದರ್ಶನದಲ್ಲಿ ಬಳಸಿದ ಕೆಟಿಎಂ ಬೈಕ್‍ಗಳು ಬೇಲೂರು ರಸ್ತೆಯಲ್ಲಿರುವ ಕೆಟಿಎಂ ಮಳಿಗೆಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದಕ್ಕೆ ಮೊದಲು ಶಿರಸಿ, ದಾವಣಗೆರೆ, ಗೋಕಾಕ, ಹೊಸಪೇಟೆ, ಶಿವಮೊಗ್ಗ, ವಿಜಯಪುರ, ಕಂಚಿಪುರ, ಕೊಯಮತ್ತೂರು, ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ಕೆಟಿಎಂ ಸಾಹಸ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

Facebook Comments

Sri Raghav

Admin