ವಿಶ್ವಕಪ್ ಆಡುವರೇ ಧೋನಿ, ಮಾಲಿಂಗ..?

World-Cup--01

– ಜಯಪ್ರಕಾಶ್
ವಿಶ್ವ ಕ್ರಿಕೆಟ್ ಕಂಡ ಇಬ್ಬರು ಶ್ರೇಷ್ಠ ಆಟಗಾರರಿಗೆ ನಿಜವಾಗಿಯೂ ಅಗ್ನಿಪರೀಕ್ಷೆ ಎದುರಾಗಿದೆ. ಆ ಇಬ್ಬರು ಮೇರು ಕ್ರಿಕೆಟಿಗರಿಗೆ 2019ರ ವಿಶ್ವಕಪ್‍ನಲ್ಲಿ ಆಡಬೇಕೆಂಬ ಮಹದಾಸೆ ಆದರೆ ಅವರಿಬ್ಬರು ವಿಶ್ವಕಪ್‍ಕ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಇಂದಿನಿಂದ ಆರಂಭಗೊಳ್ಳುವ ಇಂಡೋ- ಲಂಕಾ ಸರಣಿಯಲ್ಲಿ ತಮ್ಮ ಸಾಮಥ್ರ್ಯ ಸಾಬೀತುಪಡಿಸಬೇಕಾಗಿದೆ. ಈ ಇಬ್ಬರು ಕ್ರಿಕೆಟ್ ಕಲಿಗಳು ಅಂಗಳಕ್ಕೆ ಕಾಲಿಟ್ಟರೆ ಸಾಕು ತಾವು ಪ್ರತಿನಿಧಿಸುವ ತಂಡಗಳಿಗೆ ಜಯ ತಂದುಕೊಡುವ ನಿಸ್ಸೀಮರು.ಅಂತಹ ಕಲಿಗಳು ಇದೀಗ ಮುಂದಿನ ವಿಶ್ವಕಪ್‍ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪರದಾಡುವಂತಾಗಿದೆ.

ವಿಶ್ವಕಪ್ ಆಡುವ ತಂಡಗಳಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡಲು ಆಯಾ ತಂಡಗಳ ಮುಖ್ಯಸ್ಥರು ಲೆಕ್ಕಾಚಾರ ಹಾಕುತ್ತಿದ್ದಾರೆ, ಈ ಮಧ್ಯೆ ಹಿರಿಯ ಆಟಗಾರರ ಸಾಮಥ್ರ್ಯಕ್ಕೆ ಇಂಡೋ- ಲಂಕಾ ಏಕದಿನ ಸರಣಿ ಮಾನದಂಡವಾಗಲಿದೆ. ಯಾರು ಈ ಇಬ್ಬರು ಆಟಗಾರರು ಎಂದುಕೊಂಡೀರಾ ಅವರೇ ಭಾರತ ತಂಡವನ್ನು ಶಿಖರದೆತ್ತರಕ್ಕೆ ಕೊಂಡೊಯ್ದ ಯಶಸ್ವಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಲಂಕಾದ ವೇಗದ ಅಸ್ತ್ರದ ದಿಕ್ಕನ್ನೇ ಬದಲಿಸಿದ ಲಸಿತ್ ಮಾಲಿಂಗ.

ಇತ್ತೀಚೆಗೆ ಧೋನಿ ಬ್ಯಾಟಿಂಗ್ ಹಳ್ಳ ಹಿಡಿಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದ ಬೆನ್ನಲ್ಲೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೆ ತಮ್ಮ ಬ್ಯಾಟಿಂಗ್ ವೈಭವವನ್ನು ಪ್ರದರ್ಶಿಸಿ ತಮ್ಮ ತೋಳಿನಲ್ಲಿ ಇನ್ನೂ ಕ್ರಿಕೆಟ್ ಆಡುವ ಕಸುವು ಇದೆ ಎಂಬುದನ್ನು ಮಹೇಂದ್ರ ಸಿಂಗ್ ಧೋನಿ ಜಗತ್ತಿಗೆ ಎತ್ತಿ ತೋರಿಸಿದ್ದರು.ಕಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಗ್ರಮಾನ್ಯ ಬ್ಯಾಟ್ಸ್‍ಮನ್‍ಗಳು ಕಳಪೆ ಪ್ರದರ್ಶನ ನೀಡಿದಾಗ ಹಿರಿಯ ಆಟಗಾರ ಯುವರಾಜ್ ಸಿಂಗ್‍ರೊಂದಿಗೆ ಕೂಡಿಕೊಂಡು ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದೇ ಅಲ್ಲದೆ ತಮ್ಮ ವಿಕೆಟ್ ಕೀಪಿಂಗ್‍ನಿಂದಲೂ ಗಮನ ಸೆಳೆದಿದ್ದರು.

ಆದರೆ ಗ್ರೇಟ್ ಫಿನಿಷರ್ ಎಂದು ಖ್ಯಾತಿ ಹೊಂದಿರುವ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ವೆಸ್ಟ್‍ಇಂಡೀಸ್ ವಿರುದ್ಧದ ಪಂದ್ಯವೊಂದರಲ್ಲಿ 114 ಎಸೆತಗಳಲ್ಲಿ 54 ರನ್ ಗಳಿಸಿರುವುದು ಮತ್ತೆ ಅವರ ಬ್ಯಾಟಿಂಗ್‍ಗೆ ಬಗ್ಗೆ ಆಯ್ಕೆ ಮಂಡಳಿ ಅಸಾಮಾಧಾನಗೊಂಡಿದೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಧೋನಿ ಮತ್ತೆ ಸ್ಥಾನ ಪಡೆದಿದ್ದು ಅವರ ಬ್ಯಾಟಿಂಗ್‍ನ ವೈಭವವನ್ನು ಮೆರೆಯಬೇಕಿದೆ. ಇಲ್ಲದಿದ್ದರೆ ಅವರು ಫಿಟ್‍ನೆಸ್ ಕಾರಣ ನೀಡಿ 2019ರ ವಿಶ್ವಕಪ್‍ನಲ್ಲಿ ಆಡುವ ಕನಸು ನುಚ್ಚುನೂರಾಗಲಿದೆ.

ಬ್ಯಾಟಿಂಗ್‍ನಲ್ಲಿ ಎಡವಿದರೂ ವಿಕೆಟ್ ಕೀಪಿಂಗ್‍ನಲ್ಲಿ ತನ್ನದೇ ಚಾರ್ಮ್ ಅನ್ನು ಉಳಿಸಿಕೊಂಡಿರುವ ಧೋನಿಯವರ ಸ್ಥಾನವನ್ನು ತುಂಬುವ ವಿಕೆಟ್‍ಕೀಪರ್‍ಗಾಗಿ ತಂಡದ ತರಬೇತುದಾರ ರವಿಶಾಸ್ತ್ರಿ , ನಾಯಕ ವಿರಾಟ್ ಕೊಹ್ಲಿ , ತಂಡದ ಆಯ್ಕೆ ಮಂಡಳಿ ಅಧ್ಯಕ್ಷ ಎಂ.ಎಸ್.ಕೆ.ಪ್ರಸಾದ್ ಅವರು ಎದುರು ನೋಡುತ್ತಿದ್ದು ಯುವ ವಿಕೆಟ್ ಕೀಪರ್‍ಗಳಾದ ವೃದ್ಧಿಮಾನ್ ಸಾಹ, ರಿಷಭ್‍ಪಂಥ್‍ರತ್ತ ಚಿತ್ತ ಹರಿಸಿರುವುದು ಕೂಡ ಧೋನಿಗೆ ಲಂಕಾ ಸರಣಿ ಕ್ರಿಕೆಟ್ ಜೀವನದ ಉಳಿವು ಅಳಿವಿನ ಪ್ರಶ್ನೆ ಎಂಬಂತಿದೆ.

ಮಾಲಿಂಗೂ ಅಗ್ನಿಪರೀಕ್ಷೆ:

ಲಂಕಾ ತಂಡ ಕಂಡ ಶ್ರೇಷ್ಠ ಬೌಲರ್ ಎನಿಸಿಕೊಂಡಿದ್ದ ಮಾಲಿಂಗ ಇತ್ತೀಚೆಗೆ ತಮ್ಮ ಬೌಲಿಂಗ್ ಗತಿಯನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಮಾಲಿಂಗ(33) ರ ವಯಸ್ಸು ಪ್ರಮುಖ ಕಾರಣವೆನ್ನಬಹುದು. ಇಂದು ಭಾರತ ವಿರುದ್ಧ ತಮ್ಮ 200ನೆ ಏಕದಿನ ಪಂದ್ಯವನ್ನು ಆಡಲಿರುವ ಮಾಲಿಂಗ ಬೌಲಿಂಗ್ ಲಯವನ್ನು ಕಂಡುಕೊಳ್ಳಬೇಕಿದೆ. ಇಲ್ಲದೆ ಮುಂದಿನ ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡುವಾಗ ಯುವ ಆಟಗಾರರಿಂದ ಭಾರೀ ಪೈಪೋಟಿ  ಎದುರಿಸಬೇಕಾಗುತ್ತದೆ.

ದಾಖಲೆಗೆ ಎರಡೇ ಮೆಟ್ಟಿಲು:

2011ರ ವಿಶ್ವಕಪ್‍ನಲ್ಲಿ ಶ್ರೀಲಂಕಾ ತಂಡವನ್ನು ಫೈನಲ್‍ಗೇರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮಾಲಿಂಗ ಇಂದು ಮತ್ತೊಂದು ದಾಖಲೆ ನಿರ್ಮಿಸಲು 2 ವಿಕೆಟ್‍ಗಳು ಬೇಕಾಗಿದೆ. ಇದುವರೆಗೂ ಏಕದಿನಲ್ಲಿ 298 ವಿಕೆಟ್‍ಗಳನ್ನು ಪಡೆದಿರುವ ಮಾಲಿಂಗ 300 ವಿಕೆಟ್ ಪಡೆದವರ ಕ್ಲಬ್‍ಗೆ ಸೇರುವ ತವಕದಲ್ಲಿದ್ದಾರೆ.
ಈಗಾಗಲೇ ಲಂಕಾ ಪರ ಮುತ್ತಯ್ಯ ಮುರಳೀಧರನ್ (534), ಚಾಮಿಂಡ ವಾಸ್ (400), ಸನತ್ ಜಯಸೂರ್ಯ (323) ಅತಿ ಹೆಚ್ಚು ವಿಕೆಟ್ ಪಡೆದ ಲಂಕಾ ಬೌಲರ್‍ಗಳಾಗಿದ್ದಾರೆ.

ಆದರೆ ಕೀಲು ನೋವಿನಿಂದ ಬಳಲುತ್ತಿರುವ ಮಾಲಿಂಗ 2011ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಇಂದಿನಿಂದ ಆರಂಭಗೊಳ್ಳುವ ಭಾರತ ವಿರುದ್ಧದ ಸರಣಿಯಲ್ಲಿ ಎಡವಿದರೆ 2019ರ ವಿಶ್ವಕಪ್‍ನಲ್ಲಿ ಆಡುವ ಕನಸು ನುಚ್ಚುನೂರಾಗಲಿದೆ. ಮಹೇಂದ್ರ ಸಿಂಗ್ ಧೋನಿ ಹಾಗೂ ಮಾಲಿಂಗರ ಕ್ರಿಕೆಟ್ ಇತಿಹಾಸವನ್ನು ಕಂಡಿರುವ ತಂಡದ ಆಯ್ಕೆ ಮಂಡಳಿ ಅಧ್ಯಕ್ಷರಾದ ಎಂಎಸ್‍ಕೆ ಪ್ರಸಾದ್ ಹಾಗೂ ಅಸಂಕಾ ಗುರುಸಿನ್ಹರವರು ಈ ಇಬ್ಬರು ಮೇರು ಆಟಗಾರರು 2019 ರ ವಿಶ್ವಕಪ್‍ನಲ್ಲಿ ತಂಡದ ಸದಸ್ಯರಾಗಿರುತ್ತಾರೆ ಎಂದು ಹೇಳುತ್ತಿದ್ದಾರೆಯಾದರೂ ಅವರ ವಯಸ್ಸು ಹಾಗೂ ಪ್ರದರ್ಶನಗಳ ಮೇಲೆ ಆ ಕನಸು ಸಾಕಾರಗೊಳ್ಳಬೇಕಾಗಿದೆ.

Facebook Comments

Sri Raghav

Admin