ಸುಮಂಗಲಿಯರಿಗೆ ನೀಡುವ ಬಾಗಿನ ಕುರಿತು ನಿಮಗೆಷ್ಟು ಗೊತ್ತು..?

ಈ ಸುದ್ದಿಯನ್ನು ಶೇರ್ ಮಾಡಿ

Bageena--01

ಹಿಂದೂ ಸಂಪ್ರದಾಯದಲ್ಲಿ ಹಬ್ಬ ಹರಿದಿನಗಳ ವೇಳೆ ಬಾಗಿನ ಕೊಡುವುದು ಪದ್ಧತಿ. ಸುಮಂಗಲಿ ದೇವತೆಯರ ಸಾಕ್ಷಿಯಾಗಿ ನೀಡಲಾಗುತ್ತದೆ. ಅದರಲ್ಲೂ ಗೌರಿ ಹಬ್ಬದಂದು ಗೌರಿಗೆ ವಿಶೇಷ ಪೂಜೆ ಸಲ್ಲಿಸಿ ಹೆಣ್ಣು ಮಕ್ಕಳಿಗೆ ಹಾಗೂ ಸುಮಂಗಲಿಯರಿಗೆ ಬಾಗಿನ ನೀಡುವುದು ನಮ್ಮ ಸಂಪ್ರದಾಯಗಳಲ್ಲಿ ಒಂದು.
ಇದರ ಮಹತ್ವವೇನು ಎಂಬುದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ. ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯ ತರಹ ಜೊತೆಯಲ್ಲಿ, ದಂಪತಿ ಅನ್ಯೋನ್ಯವಾಗಿರಲಿ ಎನ್ನುವ ಕಾರಣಕ್ಕೆ, ಸುಮಂಗಲಿ ತನ ಯಾವಾಗಲೂ ಇರಲೆಂದು ಹಾರೈಸಿ 16 ಸುಮಂಗಲಿ ದೇವತೆಯರ ಸಾಕ್ಷಿಯಾಗಿ, ಬಾಗಿನ ಕೊಡುತ್ತಾರೆ.

ಈ 16 ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿನ ಕೊಡಬೇಕು..ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ.. 16 ಎಳೆ ಅರಿಸಿನ ದಾರ, 16 ಗಂಟುಗಳು, 16 ಬಾಗಿನ, 16 ಎಳೆ ಗೆಜ್ಜೆವಸ್ತ್ರಗಳನ್ನು ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ. ದಾನಗಳು ಮತ್ತು ಫಲಗಳು: ಅರಿಶಿನ , ಕುಂಕುಮ, ಸಿಂಧೂರ, ಕನ್ನಡಿ, ಬಾಚಣಿಗೆ, ಕಾಡಿಗೆ, ಅಕ್ಕಿ , ತೊಗರಿಬೇಳೆ, ಉದ್ದಿನ ಬೇಳೆ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಫಲದಾನ, ಬೆಲ್ಲ, ವಸ್ತ್ರ, ಹೆಸರುಬೇಳೆಗಳನ್ನು ಬಾಗಿನದಲ್ಲಿ ಇರಿಸಿ ದಾನ ಮಾಡುವುದರಿಂದ ಸೌಭಾಗ್ಯತನ ವೃದ್ಧಿಯಾಗಿ ಮನೆಯಲ್ಲಿನ ಕಲಹ, ಸಂದೇಹ, ಸಮಸ್ಯೆಗಳು ನಿವಾರಣೆಯಾಗುವ ಜತೆಗೆ ಕುಜ ದೋಷ, ಸರ್ಪ ದೋಷ, ಅಪಮೃತ್ಯು ನಿವಾರಣೆಯಾಗುವ ಜತೆಗೆ ಇಷ್ಟಾರ್ಥ ಸಿದ್ಧಿಸಿ ವೀಳ್ಯೆದೆಲೆಯಿಂದ ಧನಲಕ್ಷ್ಮಿ, ಅಡಿಕೆಯಿಂದ ಇಷ್ಟ ಲಕ್ಷ್ಮಿ , ಬೆಲ್ಲದಿಂದ ಶ್ರೀ ಮಹಾಲಕ್ಷ್ಮಿ ಮತ್ತು ಗಣಪತಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇನ್ನು ಹೆಸರುಬೇಳೆಯಿಂದ ವಿದ್ಯಾ ಲಕ್ಷ್ಮಿ ಒಲಿಯುತ್ತಾಳೆ ಎಂದೇ ಹೇಳಲಾಗುತ್ತದೆ.
ಮಹಿಳೆಯರು ತಮ್ಮ ಸಂಸಾರದಲ್ಲಿ ಯಾವುದೇ ತರಹದ ಕಷ್ಟ, ನೋವು, ದುಃಖ ಬಂದರೂ ರಕ್ಷಿಸಲಿ ಎಂದು ಹದಿನಾರು ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರಿಗೆ ಪೂಜೆ ಮಾಡುತ್ತಾರೆ.

Facebook Comments

Sri Raghav

Admin