12,818 ಕೋಟಿಗೆ 22 ಸೀ ಗಾರ್ಡಿಯನ್ ಡ್ರೋನ್ ಖರೀದಿ

ಈ ಸುದ್ದಿಯನ್ನು ಶೇರ್ ಮಾಡಿ

Drone--01

ವಾಷಿಂಗ್ಟನ್, ಆ.20- ಸುಮಾರು ಎರಡು ಶತಕೋಟಿ ಡಾಲರ್‍ಗಳಿಗೆ(12,818 ಕೋಟಿ ರೂ.ಗಳು) 22 ಸೀ ಗಾರ್ಡಿಯನ್ ಡ್ರೋನ್‍ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ನಿರ್ಧಾರ ಕೈಗೊಂಡಿದೆ.  ಈ ಒಪ್ಪಂದದಿಂದ ಅಮೆರಿಕದಲ್ಲಿ 2,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಹಾಗೂ ಉಭಯ ದೇಶಗಳ ನಡುವೆ ಸಂಬಂಧ ಮತ್ತಷ್ಟು ಸದೃಢವಾಗಲಿದೆ ಎಂದು ಜನರಲ್ ಅಟೋಮಿಕ್ಸ್ ಸಂಸ್ಥೆಯ ಅಮೆರಿಕ ಮತ್ತು ಅಂತಾರಾಷ್ಟ್ರೀಯ ವ್ಯಾವಹಾರಿಕ ಅಭಿವೃದ್ದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಿವೇಕ್ ಲಾಲ್ ತಿಳಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಜೂನ್‍ನಲ್ಲಿ ಅಮೆರಿಕ ಪ್ರವಾಸದ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದ ವೇಳೆ ಈ ಬಗ್ಗೆ ಅಧಿಕೃತ ಘೋಷಣೆ ಪ್ರಕಟಗೊಂಡಿತ್ತು.

Facebook Comments

Sri Raghav

Admin