ಅಮಾವಾಸ್ಯೆ ಎಫೆಕ್ಟ್, ತಾಲೀಮಿನಿಂದ ಗಜಪಡೆಗೆ ರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arjuna-Dasara-Mysuru

ಮೈಸೂರು, ಆ.21-ಅಮಾವಾಸ್ಯೆ ಹಾಗೂ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಗೆ ಇಂದು ಫುಲ್‍ರೆಸ್ಟ್. ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಗಜಪಡೆಗೆ ಕಳೆದ ಎರಡು ದಿನಗಳಿಂದ ಜನ ಸಂದಣಿ, ಶಬ್ಧ, ನಗರದ ರಸ್ತೆಗಳ ಪರಿಚಯ ಮಾಡಿಕೊಡಲು ತಾಲೀಮು ಪ್ರಾರಂಭಿಸಲಾಗಿತ್ತು. ಬೆಳಿಗ್ಗೆ ಹಾಗೂ ಸಂಜೆ ಅರಮನೆಯಿಂದ ಬನ್ನಿಮಂಟಪದವರೆಗೆ ಪ್ರಮುಖ ರಸ್ತೆಗಳಲ್ಲಿ ತಾಲೀಮು ನಡೆಸಿ ಕರೆತರಲಾಗುತ್ತಿತ್ತು. ಇಂದು ಅಮಾವಾಸ್ಯೆ ಹಾಗೂ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಎಂಟು ಆನೆ ಗಳಿಗೂ ಸ್ನಾನ ಮಾಡಿಸಿ ಅರಮನೆ ಆವರಣಕ್ಕೆ ಹೊಂದಿಕೊಂಡಿರುವ ಗಣಪತಿ ದೇವಸ್ಥಾನಕ್ಕೆ ಕರೆದೊಯ್ದು ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ ಆನೆಗಳಿಗೂ ಪೂಜೆ ನೆರವೇರಿಸಿ ಕರೆತರಲಾಯಿತು.

ನಂತರ ಅವುಗಳಿಗೆ ಬೆಲ್ಲ, ಹುಲ್ಲು, ಕಬ್ಬು ಸೇರಿದಂತೆ ಪೌಷ್ಟಿಕಾಂಶವುಳ್ಳ ಆಹಾರ ನೀಡಿ ರೆಸ್ಟ್ ಕೊಡಲಾಗಿದೆ. ಅಮಾವಾಸ್ಯೆ ದಿನಗಳಲ್ಲಿ ಸಾಮಾನ್ಯವಾಗಿ ಪ್ರಾಣಿಗಳ ಮನಸ್ಸು ಚಂಚಲಗೊಳ್ಳುವ ಸಾಧ್ಯತೆ ಇರುತ್ತದೆ. ಜತೆಗೆ ಇಂದು ಗ್ರಹಣವೂ ಸೇರಿರುವುದರಿಂದ ಮುಂಜಾಗ್ರತೆಯಾಗಿ ಆನೆಗಳನ್ನು ಹೊರಗೆ ಕಳುಹಿಸದೆ ಅರಮನೆ ಕ್ಯಾಂಪ್‍ನಲ್ಲಿ ವಿಶ್ರಾಂತಿ ನೀಡಲಾಗಿದೆ.

Facebook Comments

Sri Raghav

Admin