ಅಮೆರಿಕ-ದ.ಕೊರಿಯಾ ಜಂಟಿ ಸಮರಾಭ್ಯಾಸದಿಂದ ಮತ್ತಷ್ಟು ಕೆರಳಿದ ಉತ್ತರ ಕೊರಿಯಾ

ಈ ಸುದ್ದಿಯನ್ನು ಶೇರ್ ಮಾಡಿ

North-Korea--01

ವಾಷಿಂಗ್ಟನ್, ಆ.21-ಯುದ್ಧೋನ್ಮಾದದಲ್ಲಿರುವ ಉತ್ತರ ಕೊರಿಯಾದ ದಾಳಿ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಇಂದಿನಿಂದ ವಾರ್ಷಿಕ ಸಮರಾಭ್ಯಾಸ (ವಾರ್ ಗೇಮ್) ಆರಂಭಿಸಿದೆ. ಈ ಎರಡೂ ದೇಶಗಳ ಯುದ್ಧಾಭ್ಯಾಸದಿಂದ ಉತ್ತರ ಕೊರಿಯ ಮತ್ತಷ್ಟು ಕೆರಳಿ ಕೆಂಡಾಮಂಡಲವಾಗಿದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿ ಸಮರಾಭ್ಯಾಸ ಕೈಗೊಂಡಿದ್ದೇ ಆದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಪಯೊಂಗ್‍ಯಾಂಗ್ ಸ್ಪಷ್ಟ ಎಚ್ಚರಿಕೆ ನೀಡಿತ್ತು.

2018 ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಆಯ್ಕೆಯ ಪಕ್ಷ ..?

View Results

Loading ... Loading ...

ಉಲ್ಚಿ ಫ್ರೀಡಂ ಗಾರ್ಡಿಯನ್‍ನಲ್ಲಿ ಎರಡೂ ದೇಶಗಳ ಸಾವಿರಾರು ಯೋಧರು ಜಂಟಿ ಮಿಲಿಟರಿ ತಾಲೀಮಿನಲ್ಲಿ ಪಾಲ್ಗೊಂಡಿದ್ದಾರೆ. ಎರಡು ವಾರಗಳ ಕಾಲ ಈ ಸಮರಾಭ್ಯಾಸ ನಡೆಯಲಿದೆ.  ಉತ್ತರ ಕೊರಿಯಾ ಒಂದು ವೇಳೆ ಜಪಾನ್, ಗುವಾಂ ಅಥವಾ ದಕ್ಷಿಣ ಕೊರಿಯಾ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದೇ ಆದರೆ ಅದರ ವಿರುದ್ಧ ಬಲ ಪ್ರಯೋಗ ಮಾಡಲು ಸಜ್ಜಾಗಿರುವುದಾಗಿ ಅಮೆರಿಕ ಈ ಹಿಂದೆ ಎಚ್ಚರಿಕೆ ನೀಡಿತ್ತು.   ಆಗಾಗ ಕ್ಷಿಪಣಿಗಳನ್ನು ಪ್ರಯೋಗಿಸುತ್ತಾ ವಿಶ್ವದಲ್ಲಿ ಆತಂಕ ಸೃಷ್ಟಿಸುತ್ತಿರುವ ಉತ್ತರ ಕೊರಿಯಾಗೆ ಕ್ರೋಧಾಗ್ನಿಯೊಂದಿಗೆ ಉತ್ತರ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು.

Facebook Comments

Sri Raghav

Admin