ಇಂದಿರಾಕ್ಯಾಂಟೀನ್ ಮುಂದೆ ಕುಡಿಯುವ ನೀರಿಲ್ಲ ನಾಮಫಲಕ ಹಾಕಿದ್ದ ಆರೋಗ್ಯ ಪರಿವೀಕ್ಷಕ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

Indira-Canteen--Mayor

ಬೆಂಗಳೂರು, ಆ.21- ಕುಡಿಯುವ ನೀರಿಲ್ಲ ಎಂದು ಇಂದಿರಾಕ್ಯಾಂಟೀನ್ ಮುಂಭಾಗ ಕ್ಯಾಂಟೀನ್ ಮುಚ್ಚಿದೆ ಎಂದು ನಾಮಫಲಕ ಹಾಕಿದ್ದ ಹಿರಿಯ ಆರೋಗ್ಯ ಪರಿವೀಕ್ಷಕ ನಾಗೇಶ್ ಅಮಾನತುಗೊಂಡಿದ್ದಾರೆ. ಬಹುತೇಕ ಇಂದಿರಾ ಕ್ಯಾಂಟೀನ್‍ಗಳಲ್ಲಿ ಸಮರ್ಪಕವಾಗಿ ತಿಂಡಿ ವಿತರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಮೇಯರ್ ಜಿ.ಪದ್ಮಾವತಿ ಅವರು ಬೆಳ್ಳಂಬೆಳಗ್ಗೆ ವಿವಿಧ ಕ್ಯಾಂಟೀನ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಬ್ರಹ್ಮಣ್ಯನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಮುಂಭಾಗ ಕ್ಯಾಂಟೀನ್ ಮುಚ್ಚಿದೆ ಎಂಬ ನಾಮಫಲಕ ಹಾಕಲಾಗಿತ್ತು. ಈ ಕುರಿತಂತೆ ಹಿರಿಯ ಆರೋಗ್ಯ ಪರಿವೀಕ್ಷಕ ನಾಗೇಶ್ ಅವರನ್ನು ಮೇಯರ್ ಅವರು ಪ್ರಶ್ನಿಸಿದಾಗ, ಮೇಡಂ ಕುಡಿಯಲು ನೀರಿಲ್ಲ. ಹೀಗಾಗಿ ಕ್ಯಾಂಟೀನ್ ಮುಚ್ಚಲಾಗಿದೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ಅಧಿಕಾರಿಯ ಈ ಧೋರಣೆಯನ್ನು ತರಾಟೆಗೆ ತೆಗೆದುಕೊಂಡ ಮೇಯರ್ ಅವರು ಆತನ ವರ್ತನೆ ಕುರಿತಂತೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಗಮನಕ್ಕೆ ತಂದು ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಸೂಚಿಸಿದರು.
ಕ್ಯಾಂಟೀನ್ ಮುಚ್ಚಿದೆ ಎಂಬ ನಾಮಫಲಕ ಹಾಕಿದ್ದರೂ ಹೊರಗಡೆ ತಿಂಡಿಗಾಗಿ ಕಾದು ಕುಳಿತಿದ್ದ ಗ್ರಾಹಕರಿಗೆ ತಿಂಡಿ ವಿತರಿಸುವಂತೆಯೂ ಮೇಯರ್ ಆದೇಶಿಸಿದರು.

ನಂತರ ಮೇಯರ್ ಅವರು ಪ್ರಕಾಶ್‍ನಗರ, ಮಾದನಾಯಕನಹಳ್ಳಿ ಮತ್ತಿತರೆಡೆಯ ಇಂದಿರಾ ಕ್ಯಾಂಟೀನ್ ಹಾಗೂ ಬೆಂಗಳೂರು ಅರಮನೆ ಮೈದಾನದಲ್ಲಿರುವ ಅಡುಗೆ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ಬಡವರ ಹಸಿವು ನೀಗಿಸಲೆಂದು ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್‍ಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು ಮತ್ತು ಗ್ರಾಹಕರಿಗೆ ತೊಂದರೆ ನೀಡಬಾರದು. ನಿಗದಿ ಪಡಿಸಿರುವಷ್ಟು ಊಟ-ತಿಂಡಿಯನ್ನು ಸರಬರಾಜು ಮಾಡಬೇಕು. ಇಲ್ಲದಿದ್ದಲ್ಲಿ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

2018 ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಆಯ್ಕೆಯ ಪಕ್ಷ ..?

View Results

Loading ... Loading ...
Facebook Comments

Sri Raghav

Admin