ಎಷ್ಟೇ ತಿಪ್ಪರಲಾಗ ಹೊಡೆದರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲ್ಲ : ಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda--01

ಬಾಗಲಕೋಟೆ, ಆ.21- ಮುಂಬರುವ 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಎಷ್ಟೇ ತಿಪ್ಪರಲಾಗ ಹೊಡೆದರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದಿಲ್ಲಿ ತಿರುಗೇಟು ನೀಡಿದರು. ಶ್ರಾವಣ ಮಾಸದ ಕೊನೆಯ ದಿನವಾದ ಇಂದು ಬಾಗಲಕೋಟೆ ತಾಲೂಕಿನ ತುಳಸಿಗಿರಿ ಹನುಮಂತ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಟನೆಯೇ ನಮಗೆ ಶಕ್ತಿ. ನಮ್ಮ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತ. ನಮಗೆ ದೈವಬಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾಗಲಕೋಟೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದ್ದು, ಅದಕ್ಕೆ ತಕ್ಕಂತೆ ಸಿದ್ಧತೆ ಕೂಡ ಆಗಿದೆ ಎಂದು ಹೇಳಿದರು.2004ರಲ್ಲಿ 58 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಜಯಗಳಿಸಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಬಾರಿಯ 2018ರ ಚುಣಾವಣೆಯಲ್ಲಿ 120 ಕ್ಷೇತ್ರದ ಗುರಿ ಇಟ್ಟುಕೊಂಡಿದೆ ಎಂದು ತಿಳಿಸಿದರು.

Devegowda--02

ಉತ್ತರ ಕರ್ನಾಟಕದ ಜನ ಕಾಂಗ್ರೆಸ್ ಸರ್ಕಾರದಿಂದ ಬೇಸತ್ತು ಹೋಗಿದ್ದಾರೆ. ಆ ಸರ್ಕಾರದ ಕೊಡುಗೆ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ನೀವು ಕಂಡಿದ್ದೀರಿ. ಆಲಮಟ್ಟಿಯಲ್ಲಿ ಮೊನ್ನೆ ನಡೆದ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಮತ್ತು ಜೆಡಿಎಸ್ ಎಷ್ಟೆ ತಿಪ್ಪರಲಾಗ ಹೊಡೆದರೂ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದರು. ಬಸವರಾಜ ಹೊರಟ್ಟಿ ಮಾತನಾಡಿ, ನಾವು ಪಕ್ಷದ ಸಂಘಟನೆಗಾಗಿ ಬಂದಿದ್ದೇವೆ. 2018ರ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ನಮ್ಮ ರಾಜ್ಯದಲ್ಲಿ ಈ ಬಾರಿ ಸಂಘಟನೆ ಹೆಚ್ಚು ಕೆಲಸ ಮಾಡಿದೆ ಹಾಗೂ ನಮ್ಮ ಕಾರ್ಯಕರ್ತರು ರಾಜ್ಯದಲ್ಲಿ ಒಗ್ಗಟ್ಟಾಗಿದ್ದಾರೆ. ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದರು.

Devegowda--03

ಬೆಳಗಾವಿಯಲ್ಲಿ ಲಿಂಗಾಯತ ಹಾಗೂ ವೀರಶೈವ ಧರ್ಮದ ಬಗ್ಗೆ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಐದು ಲಕ್ಷ ಜನ ಸೇರಲಿದ್ದಾರೆ ಅಂದು ಅಂತಿಮ ತೀರ್ಮಾನ ಆಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಎಚ್.ಡಿ.ದೇವೆಗೌಡರು ರಾಯಚೂರು, ಬೀದರ್ ಗುಲ್ಬರ್ಗಾ ಕಡೆ ಹೋಗುವ ನಿರೀಕ್ಷೆ ಇದೆ. ಆಲಮಟ್ಟಿಗೆ ಹೋಗಿ ತದನಂತರ ಮುಧೋಳ, ರಭಕವಿ, ಬನಹಟ್ಟಿ , ಜಮಖಂಡಿ, ಹುಬ್ಬಳ್ಳಿ ಮುಂತಾದೆಡೆ ಪ್ರವಾಸ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಪರಿಷತ್ ಸದಸ್ಯ ಶರವಣ, ಕಲಬುರ್ಗಿ ಜಿಲ್ಲೆಯ ಅಧ್ಯಕ್ಷ ರವಿ ಹುಣಿಶ್ಯಾಳ, ಜಿಲ್ಲಾ ಉಪಾಧ್ಯಕ್ಷರು, ಬಾಂದಿಗೆಯವರು, ಜಿಲ್ಲೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

Facebook Comments

Sri Raghav

Admin