ಗೂಡ್ಸ್ ಹಡಗಿಗೆ ಅಮೆರಿಕ ಯುದ್ಧನೌಕೆ ಡಿಕ್ಕಿ, 10 ನಾವಿಕರು ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

America--01

ಸಿಂಗಪುರ್, ಆ.21-ಸರಕುಸಾಗಣೆ ಹಡಗೊಂದಕ್ಕೆ ಅಮೆರಿಕ ಯುದ್ಧನೌಕೆ ಡಿಕ್ಕಿಯಾಗಿ 10 ನಾವಿಕರು ಕಣ್ಮರೆಯಾಗಿರುವ ಹಾಗೂ ಐವರು ತೀವ್ರ ಗಾಯಗೊಂಡಿರುವ ಘಟನೆ ಸಿಂಗಪುರ್ ಕರಾವಳಿಯಲ್ಲಿ ಇಂದು ನಡೆದಿದೆ. ನಾಪತ್ತೆಯಾಗಿರುವ ಸಿಬ್ಬಂದಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಅಮೆರಿಕ ಸಮರ ಸೌಕೆ ಅಪಘಾತಕ್ಕೀಡಾಗಿರುವುದು ಇದು ಎರಡನೇ ಬಾರಿ.

ಮಾರ್ಗದರ್ಶಿ-ಕ್ಷಿಪಣಿ ನಾಶಕ ಹೊಂದಿರುವ ಯುಎಸ್‍ಎಸ್ ಜಾನ್ ಎಸ್ ಮ್ಯಾಕ್‍ಕೈನ್ ನೌಕೆಯು ಸಿಂಗಾಪುರ್ ಪೂರ್ವ ಭಾಗದಲ್ಲಿ ಹಾಗೂ ಮಲಾಕ್ಕಾ ಜಲಸಂಧಿ ಬಳಿ ಇಂದು ಮುಂಜಾನೆ ವಾಣಿಜ್ಯ ಹಡಗು ಅಲ್‍ನಿಕ್ ಎಂಸಿ ಹಡಗಿಗೆ ಅಪ್ಪಳಿಸಿತು ಎಂದು ಅಮೆರಿಕ ನೌಕಾಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಯುದ್ಧ ನೌಕೆ ಜಖಂಗೊಂಡಿದ್ದು, ಈ ಅಪಘಾತದ ಬಳಿಕ 10 ನಾವಿಕರ ನಾಪತ್ತೆಯಾಗಿದ್ದಾರೆ ಹಾಗೂ ಐವರಿಗೆ ತೀವ್ರ ಗಾಯಗಳಾಗಿವೆ. ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ನಾವಿಕರ ಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಐವರು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin