ಚಿಕಿತ್ಸೆಗೆ ಬಂದಿದ್ದ ಮಹಿಳೆ ಮೇಲೆ ವೈದ್ಯನಿಂದ ಕ್ಲಿನಿಕ್‍ನಲ್ಲೇ ಅತ್ಯಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

GangRape--01

ಪುಣೆ, ಆ.21-ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯೊಬ್ಬಳ ಮೇಲೆ ಕ್ಲಿನಿಕ್‍ನಲ್ಲೇ ವೈದ್ಯನೊಬ್ಬ ಅತ್ಯಾಚಾರ ಎಸಗಿರುವ ಕೃತ್ಯ ಮಹಾರಾಷ್ಟ್ರದ ನೌಪಾದದಲ್ಲಿ ನಡೆದಿದೆ. ಮುಂಬೈನ ಧಾರಾವಿ ಕೊಳಗೇರಿಯಿಂದ ಚಿಕಿತ್ಸೆಗಾಗಿ ಆಗಮಿಸಿದ್ದ ಮಹಿಳೆ ಮೇಲೆ ಬಂಜೆತನ ನಿವಾರಣೆ ಕ್ಲಿನಿಕ್ ನಡೆಸುತ್ತಿದ್ದ ಕಾಮುಕ ವೈದ್ಯ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಆರ್.ಡಿ.ಸಿಂಧೆ ತಿಳಿಸಿದ್ದಾರೆ.

ತಪಾಸಣೆ ನೆಪದಲ್ಲಿ ಕೊಠಡಿಗೆ ಕರೆದೊಯ್ದು ವೈದ್ಯ ಅತ್ಯಾಚಾರ ಎಸಗಿದ. ಮಹಿಳೆ ಕಿರುಚಿಕೊಳ್ಳಲು ಯತ್ನಿಸಿದಾಗ ಆಕೆಯ ಬಾಯಿಯನ್ನು ಒತ್ತಿ ಹಿಡಿದು ಈ ವಿಷಯವನ್ನು ಹೊರಗೆ ತಿಳಿಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವೈದ್ಯನ ವಿರುದ್ಧ ಅತ್ಯಾಚಾರ ಮತ್ತು ಪ್ರಾಣ ಬೆದರಿಕೆ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಆಯ್ಕೆಯ ಪಕ್ಷ ..?

View Results

Loading ... Loading ...
Facebook Comments

Sri Raghav

Admin