ಡೊಕ್ಲಾಮ್ ಬಿಕ್ಕಟ್ಟು ಶೀಘ್ರ ಇತ್ಯರ್ಥವಾಗಲಿದೆ : ರಾಜನಾಥ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Rajnath-singh

ನವದೆಹಲಿ, ಆ.21-ಈಶಾನ್ಯ ಭಾರತದ ಸಿಕ್ಕಿಂನ ಡೊಕ್ಲಾಮ್ ಪ್ರಸ್ಥಭೂಮಿಯಲ್ಲಿ ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಸೇನಾ ಸಂಘರ್ಷದ ಬಿಕ್ಕಟ್ಟು ಸದ್ಯದಲ್ಲೇ ಬಗೆಹರಿಯಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಈ ವಿಷಯದಲ್ಲಿ ಚೀನಾ ಸಹ ಪೂರಕ ಮತ್ತು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬ ಆಶಾಭಾವನೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಈ ಬಿಕ್ಕಟ್ಟಿಗೆ ಶೀಘ್ರದಲ್ಲೇ ಪರಿಹಾರ ಲಭಿಸಲಿದೆ. ಅದೇ ರೀತಿ ಚೀನಾ ಸಹ ಈ ವಿಷಯದಲ್ಲಿ ಧನಾತ್ಮಕವಾಗಿ ವರ್ತಿಸಲಿದ ಎಂಬ ಭರವಸೆ ತಮಗಿದೆ ಎಂದು ಹೇಳಿದರು.
ಭಾರತವು ಮೊದಲಿನಿಂದಲೂ ಶಾಂತಿಪ್ರಿಯ ದೇಶ. ನಮಗೆ ಶಾಂತಿ ಮತ್ತು ಸೌಹಾರ್ದಯುತ ಸಹಕಾರ ಬೇಕೆಂಬ ಸಂದೇಶವನ್ನು ನಮ್ಮ ಎಲ್ಲ ನೆರೆಹೊರೆ ರಾಷ್ಟ್ರಗಳಿಗೆ ನಾವು ಮತ್ತೊಮ್ಮೆ ಮನವರಿಕೆ ಮಾಡಿಕೊಡಲು ಬಯಸುತ್ತೇವೆ ಎಂದು ಸಿಂಗ್ ತಿಳಿಸಿದರು.

Facebook Comments

Sri Raghav

Admin