ತಮಿಳುನಾಡಿನಲ್ಲಿ ಎರಡೆಲೆಗಳ ವಿಲೀನಕ್ಕೆ ಮತ್ತೆ ಕಂಟಕ

ಈ ಸುದ್ದಿಯನ್ನು ಶೇರ್ ಮಾಡಿ

AAIADMa--01

ಚೆನ್ನೈ, ಆ.21-ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು ಎಐಎಡಿಎಂಕೆ ಯ ಉಭಯ ಬಣಗಳು ವಿಧ್ಯುಕ್ತವಾಗಿ ವಿಲೀನಗೊಳ್ಳಬೇಕಿತ್ತು. ಆದರೆ ಎರಡೆಲೆಗಳು ಒಗ್ಗೂಡುವುದಕ್ಕೆ ಮತ್ತೆ ಕಂಟಕ ಎದುರಾಗಿದೆ. ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಹಾಗೂ ಜೈಲಿನಲ್ಲಿರುವ ವಿ.ಕೆ.ಶಶಿಕಲಾ ನಟರಾಜನ್ ಅವರನ್ನು ಪಕ್ಷದಿಂದ ಸಂಪೂರ್ಣವಾಗಿ ಹೊರಗಿಡುವ ತನಕ ವಿಲೀನ ಅಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಪನ್ನೀರ್‍ಸೆಲ್ವಂ ನೇತೃತ್ವದ ಬಣ ಸ್ಪಷ್ಟಪಡಿಸಿದೆ. ಇದರಿಂದಾಗಿ ಎರಡೂ ಬಣಗಳು ಒಂದಾಗುವ ಸಾಧ್ಯತೆ ತಕ್ಷಣಕ್ಕೆ ಕಂಡುಬರುತ್ತಿಲ್ಲ.

ಶಶಿಕಲಾ ಅವರನ್ನು ಪಕ್ಷದಿಂದ ಹೊರಗಿಡುವ ಬಗ್ಗೆ ದಾಖಲೆ ನೀಡುವಂತೆ ಸೆಲ್ವಂ ಬಿಗಿ ಪಟ್ಟು ಹಿಡಿದಿದ್ದಾರೆ. ಅಲ್ಲಿಯ ತನಕ ವಿಲೀನ ಅಸಾಧ್ಯ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆಯ ಮತ್ತೊಂದು ಬಣ ಶಶಿಕಲಾ ಅವರನ್ನು ಪಕ್ಷದಿಂದ ದೂರವಿಡುವ ಬಗ್ಗೆ ಇನ್ನೂ ದೃಢನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಪನ್ನೀರ್‍ಸೆಲ್ವಂ ಈ ಬಿಗಿ ಪಟ್ಟುಹಿಡಿದಿದ್ದಾರೆ. ಒಟ್ಟಾರೆ ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಎರಡೂ ಬಣಗಳ ವಿಲೀನಕ್ಕೆ ಮತ್ತೆ ಮತ್ತೆ ಕಂಟಕಗಳು ಎದುರಾಗುತ್ತಲೇ ಇವೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಆಯ್ಕೆಯ ಪಕ್ಷ ..?

View Results

Loading ... Loading ...
Facebook Comments

Sri Raghav

Admin