ತಲೈವಾ ರಾಜಕೀಯ ಸೇರುವುದು ಪಕ್ಕಾ

ಈ ಸುದ್ದಿಯನ್ನು ಶೇರ್ ಮಾಡಿ

Rajnikanrt--01

ತಿರುಚಿರಾಪಳ್ಳಿ (ತಮಿಳುನಾಡು), ಆ.21-ತಾವು ರಾಜಕೀಯ ಸೇರಲು ತೀರ್ಮಾನಿಸಿರುವುದಾಗಿ ಸೂಪರ್‍ಸ್ಟಾರ್ ರಜನಿಕಾಂತ್ ನನಗೆ ತಿಳಿಸಿದ್ಧಾರೆ ಎಂದು ಲೇಖಕ ಮತ್ತು ಚಿಂತಕ ತಮಿಳರುವಿ ಮಣಿಯನ್ ಹೇಳಿದ್ದಾರೆ. ತಲೈವಾ ರಾಜಕೀಯ ಪ್ರವೇಶದ ಬಗ್ಗೆ ಗೊಂದಲಗಳು ಇರುವಾಗಲೇ ಇವರ ಹೇಳಿಕೆ ಮಹತ್ವದ್ದಾಗಿದೆ.  ತಿರುಚಿರಾಪಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿರುವ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಪರ್ಯಾಯವಾಗಿ ರಜನಿಕಾಂತ್ ಒಂದು ಪ್ರಬಲ ಪ್ರಾದೇಶಿಕ ರಾಜಕೀಯ ಬಣ ರಚಿಸಬೇಕು ಎಂಬುದು ತಮ್ಮ ಬಯಕೆಯಾಗಿದೆ ಎಂದರು.

ಈ ಎರಡೂ ದ್ರಾವಿಡ ಪಕ್ಷಗಳನ್ನು ತಮಿಳುನಾಡಿನಿಂದ ಕಿತ್ತೊಗೆಯಬೇಕು. ಈ ಪಕ್ಷಗಳು ರಾಜ್ಯದಲ್ಲಿ ಆಡಳಿತವನ್ನು ಹದಗೆಡಿಸಿವೆ ಎಂದು ಮಣಿಯನ್ ಆರೋಪಿಸಿದರು.

Facebook Comments

Sri Raghav

Admin