ನಾಳೆ ಬ್ಯಾಂಕ್’ಗಳ ಕಡೆ ಹೋಗಬೇಡಿ

ಈ ಸುದ್ದಿಯನ್ನು ಶೇರ್ ಮಾಡಿ

Bank

ನವದೆಹಲಿ/ಮುಂಬೈ, ಆ.21-ಬ್ಯಾಂಕ್‍ಗಳ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರತಿಭಟಿಸಿ ನಾಳೆ ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ. ಇದರಿಂದಾಗಿ ಸರ್ಕಾರಿ ಸ್ವಾಮ್ಯದ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಸೇವೆಗಳು ಮತ್ತು ವಹಿವಾಟು ವ್ಯತ್ಯಯಗೊಳ್ಳಲಿದೆ. ಆದರೆ, ಖಾಸಗಿ ಬ್ಯಾಂಕುಗಳ ಸೇವೆಯಲ್ಲಿ ಯಾವುದೆ ಅಡಚಣೆ ಇರುವುದಿಲ್ಲ.

ರಾಷ್ಟ್ರಾದ್ಯಂತ 1,32,000 ಬ್ಯಾಂಕ್ ಶಾಖೆಗಳ ಸುಮಾರು 10 ಲಕ್ಷ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬ್ಯಾಂಕುಗಳ ಸುಧಾರಣೆ ಹೆಸರಿನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಹಾಗೂ ಎಲ್ಲ ಬ್ಯಾಂಕುಗಳನ್ನೂ ಒಂದೇ ಬ್ಯಾಂಕಿಂಗ್ ಹೂಡಿಕೆ ಕಂಪನಿಯ ಅಡಿಯಲ್ಲಿ ತರಲು ಸರ್ಕಾರ ಉದ್ದೇಶಿಸಿದೆ. ಇದನ್ನು ಪ್ರತಿಭಟಿಸಿ ದೇಶಾದ್ಯಂತ ಮುಷ್ಕಾರಕ್ಕೆ ಕರೆ ನೀಡಲಾಗಿದೆ ಎಂದು ಯುನೈಟೆಡ್ ಪೋರಂ ಆಫ್ ಬ್ಯಾಂಕಿಂಗ್ ಯೂನಿಯನ್ಸ್ (ಯುಎಫ್‍ಬಿಯು) ತಿಳಿಸಿದೆ.  ರಾಷ್ಟ್ರಾದ್ಯಂತ 1,32,000 ಬ್ಯಾಂಕ್ ಶಾಖೆಗಳ ಸುಮಾರು 10 ಲಕ್ಷ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

Facebook Comments

Sri Raghav

Admin