ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾರ ಹತ್ಯೆ ಯತ್ನ ಪ್ರಕರಣದಲ್ಲಿ 10 ಮಂದಿಗೆ ಗಲ್ಲು

ಈ ಸುದ್ದಿಯನ್ನು ಶೇರ್ ಮಾಡಿ

Sheikh-Hasina

ಢಾಕಾ, ಆ.21-ಪ್ರಧಾನಮಂತ್ರಿ ಶೇಖ್ ಹಸೀನಾ ಅವರನ್ನು 17 ವರ್ಷಗಳ ಹಿಂದೆ ಹತ್ಯೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಬಾಂಗ್ಲಾದೇಶದ ನ್ಯಾಯಾಲಯವೊಂದು 10 ಮಂದಿಗೆ ಮರಣದಂಡನೆ ವಿಧಿಸಿದೆ. ಅಲ್ಲದೇ ಒಂಭತ್ತು ಮಂದಿಗೆ ತಲಾ 20 ವರ್ಷಗಳ ಜೈಲು ಶಿಕ್ಷೆ ಜಾರಿಗೊಳಿಸಿದೆ.
ಹಸೀನಾ ಅವರು 2000 ಇಸವಿಯಲ್ಲಿ ತವರು ಗ್ರಾಮ ಗೋಪಾಲ್‍ಗಂಜ್‍ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆ ಮೈದಾನದಲ್ಲಿ ಪ್ರಬಲ ಬಾಂಬ್ ಇಟ್ಟು ಪ್ರಧಾನಿಯವರನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂಬ ಸಂಗತಿ ಬಯಲಾಗಿತ್ತು. ಸಭೆಗೆ ಮುಂಚಿತವಾಗಿಯೇ ಭದ್ರತಾ ಸಿಬ್ಬಂದಿ ಬಾಂಬನ್ನು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದರು.

ವಿಶೇಷಾಧಿಕಾರಗಳ ಕಾಯ್ಡೆಯಡಿ ಒಟ್ಟು 25 ಆರೋಪಿಗಳನ್ನು ಬಂಧಿಸಲಾಗಿತ್ತು. ಇವರಲ್ಲಿ 10 ಅಪರಾಧಿಗಳಿಗೆ ಗಲ್ಲು, 9 ಮಂದಿಗೆ ತಲಾ 20 ವರ್ಷ ಸೆರೆವಾಸದ ಜೊತೆಗೆ 20,000 ಟಾಕಾ ದಂಡ ವಿಧಿಸಲಾಗಿದೆ. ಇತರ ನಾಲ್ವರನ್ನು ದೋಷಮುಕ್ತಗೊಳಿಸಲಾಗಿದೆ.

Facebook Comments

Sri Raghav

Admin