ಭಾರತ ವಿರುದ್ಧ ಸೋಲು : ರೊಚ್ಚಿಗೆದ್ದ ಲಂಕಾ ಅಭಿಮಾನಿಗಳಿಂದ ಬಸ್ ತಡೆದು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Cricke--01

ದಾಂಬುಲಾ,ಆ.21- ಇಲ್ಲಿನ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ ಹೀನಾಯ ಸೋಲು ಅನುಭವಿಸಿದ್ದಕ್ಕೆ ರೋಚಿಗದ್ದ ಅಭಿಮಾನಿಗಳು ಲಂಕಾ ತಂಡದ ಆಟಗಾರರ ಬಸ್ ಅನ್ನು ತಡೆದಿರುವ ಘಟನೆ ನಡೆದಿದೆ. ಟೆಸ್ಟ್ ಸರಣಿಯಲ್ಲಿ ಲಂಕಾ ದಯನೀಯ ವೈಫಲ್ಯ ಅನುಭವಿಸಿ 3-0ಯಿಂದ ಸೋಲು ಅನುಭವಿಸಿತ್ತು. ಏಕದಿನ ಪಂದ್ಯದಲ್ಲಿ ಗೆಲವು ಸಾಧಿಸಬಹುದು ಎಂಬ ಅಭಿಮಾನಿಗಳ ಲೆಕ್ಕಚಾರವಾಗಿತ್ತು. ಆದರೆ ಇಲ್ಲಿ ಕೂಡ ಅದೇ ಕೆಟ್ಟ ಪ್ರದರ್ಶನದಿಂದ ಮತ್ತೆ ಲಂಕಾಗೆ ಭಾರೀ ಮುಖಭಂಗ ಅನುಭವಿಸಿತ್ತು.

ಪಂದ್ಯ ಮುಗಿಸಿ ಬಸ್ ಬಳಿ ಆಟಗಾರರು ತೆರಳುತ್ತಿದ್ದ ವೇಳೆ 50ಕ್ಕೂ ಹೆಚ್ಚು ಅಭಿಮಾನಿಗಳು ಘೋಷಣೆ ಕೂಗಿ ಮುತ್ತಿಗೆ ಹಾಕಿ ಸುಮಾರು ಅರ್ಧ ಗಂಟೆಗೆ ಹೆಚ್ಚೂ ಕಾಲ ಬಸ್ ತಡೆಹಿಡಿದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದು ಆಟಗಾರರನ್ನು ರಕ್ಷಣೆ ಮಾಡಿದ್ದಾರೆ.

Facebook Comments

Sri Raghav

Admin